ಶ್ರೀ ವಿದ್ಯಾ ಸಾಗರ ಕಲಾ ಶಾಲೆ ಸುಬ್ರಹ್ಮಣ್ಯ ವತಿಯಿಂದ

0

ಉಚಿತ ಬೇಸಿಗೆ ಶಿಬಿರ ಉದ್ಘಾಟನೆ

ಪ್ರತಿಯೊಬ್ಬರಲ್ಲಿಯೂ ಕೂಡ ವಿಶೇಷವಾದ ಪ್ರತಿಭೆ ಇದೆ: ಕೃಷ್ಣ ಭಟ್

ಪ್ರತಿಯೊಬ್ಬರಲ್ಲಿಯೂ ಕೂಡ ವಿಶೇಷವಾದಂತಹ ಪ್ರತಿಭೆ ಇದೆ. ಪ್ರತಿಭೆಯನ್ನು ಪ್ರಕಟಪಡಿಸುವಂತಹ ವೇದಿಕೆಗಳ ನಿರ್ಮಾಣವಾಗಬೇಕು ಆಗ ಮಾತ್ರ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳ ಅನಾವರಣವಾಗುವುದಕ್ಕೆ ಸಾಧ್ಯ ಎಂದು ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆಯ ಗಣಿತ ಅಧ್ಯಾಪಕರಾದ ಕೃಷ್ಣ ಭಟ್ ನುಡಿದರು.

ಅವರು ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಶ್ರೀ ವಿದ್ಯಾಸಾಗರ ಕಲಾ ಶಾಲೆ ಹಮ್ಮಿಕೊಂಡಿರುವ ಮೂರು ದಿನಗಳ ಬೇಸಿಗೆ ಉಚಿತ ಶಿಬಿರವನ್ನು ಏ.23 ರ ವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಲಾ ಶಾಲೆಯ ಅಧ್ಯಕ್ಷರಾದ ಹರೀಶ್ ಕಾಮತ್ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯದ ಮಾಸ್ಟರ್ ಪ್ಲಾನ್ ನ ಸದಸ್ಯರಾದ ಪವನ್, ನೀನಾಸಂ ಕಲಾವಿದರಾದ ಕುಮಾರ್ ಕೆ.ಸಿ , ಪುತ್ತೂರಿನ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುಮಂಗಲ ಶಿಬಿರಕ್ಕೆ ಶುಭ ಹಾರೈಸಿದರು.
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸತ್ಯ ಶಂಕರ ಸ್ವಾಗತಿಸಿದರು. ಶೇಖರ್ ಕೇದಿಗೆ ಬನ ವಂದಿಸಿದರು.
ಕಲಾಶಾಲೆಯ ಸಂಚಾಲಕರಾದ ಗಣೇಶ್ ಪರ್ವತಮುಖಿ, ಸದಸ್ಯರಾದ ಕಾರ್ತಿಕ್ ಮುಂತಾದವರು ಉಪಸ್ಥಿತರಿದ್ದರು.
ಸುಮಾರು 60ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.