
ಐವರ್ನಾಡಿನ ಗ್ರಾಮ ದೈವಗಳಾದ ಕೊಯಿಲ ಶ್ರೀ ಉಳ್ಳಾಕುಲು ದೈವ,ನಾಯರ್ ದೈವ ಮತ್ತು ಉಪದೈವಗಳ ನೇಮೋತ್ಸವವು ಎ.14 ರಿಂದ ಎ.24 ರವರೆಗೆ ನಡೆಯಿತು.
ಎ.14 ರಂದು ಬೆಳಿಗ್ಗೆ ಗೊನೆ ಕಡಿಯಲಾಯಿತು.
ಎ.21 ರಂದು ಬೆಳಿಗ್ಗೆ ಮುಂಡಿಗೆ ಹಾಕಲಾಯಿತು.
















ಎ.23 ರಂದು ರಾತ್ರಿ ವಾಲಸಿರಿ ನಡೆಯಿತು.
ಎ.24 ರಂದು ಬೆಳಿಗ್ಗೆ ದೊಡ್ಡಮನೆ ಮಾಳ್ಯದಿಂದ ಭಂಡಾರ ಬಂದು
ಬೆಳಿಗ್ಗೆ ಶ್ರೀ ಉಳ್ಳಾಕುಲು ದೈವಗಳ ನೇಮ ನಡೆಯಿತು.
ಮಧ್ಯಾಹ್ನ ನಾಯರ್ ನೇಮ ಮತ್ತು ಪುರುಷದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು.
ನಂತರ ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಮೊಕ್ತೇಸರರಾದ ಬೆಳ್ಯಪ್ಪ ಗೌಡ ಮಡ್ತಿಲ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಕ್ರಂ ಪೈ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮಡ್ತಿಲ, ಕಾರ್ಯದರ್ಶಿಗಳಾದ ರಾಧಾಕೃಷ್ಣ ಚಾಕೋಟೆ,ನವೀನ್ ಚಾತುಬಾಯಿ ಹಾಗೂ ಕೊಯಿಲ ಮೂವತ್ತು ಒಕ್ಕಲಿಗೆ ಸಂಬಂಧಿಸಿದ ಗ್ರಾಮ ಸಮಸ್ತರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.










