
ದ.ಕ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸನ್ಮಾನ ಕಾರ್ಯಕ್ರಮವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಏ.24 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಹಜ್ ಯಾತ್ರೆಗೆ ತೆರಳಿರುವ ಅಶ್ರಫ್ ಸಂಟ್ಯಾರ್ ಹಾಗೂ ಪುತ್ರ ಅಫ್ಫ್ಯಾನ್ ರವರಿಗೆ ಬೀಳ್ಕೊಡುವ ಕಾರ್ಯಕ್ರಮ ವನ್ನು ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಹಾಗೂ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದ ಅಧ್ಯಕ್ಷರಾದ ಜಗದೀಶ್ ರೈ, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ನೆರವೇರಿಸಿ ಸುಮತಿ ಶಕ್ತಿವೇಲು ನೆನಪಿನ ಕಾಣಿಕೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಉತ್ತಮ ಕೃಷಿ ಶಕಿ ಪ್ರಶಸ್ತಿ ಪಡೆದ ಮೋಹಿನಿ ವಿಶ್ವನಾಥ್ ಪೇರಡ್ಕ ರವರನ್ನು, ಹಿರಿಯ ಸದಸ್ಯರಾದ ಶ್ರೀಮತಿ ಸುಂದರಿ ಹಾಗೂ ಲಿಸ್ಸಿ ಮೊನಾಲಿಸಾ ಶಾಲು ಹೊದಿಸಿ ಗೌರವಿಸಿದರು ಅನುಪಮ ಸನ್ಮಾನ ಪತ್ರ ನೀಡಿದರು.















ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಹೆಚ್ಚು ಮಾನವ ದಿನಗಳ ಬಳಕೆ ಮಾಡಿ ತಾಲೂಕು ಮಟ್ಟದ ಪ್ರಶಸ್ತಿ ಪಡೆದ ಸವಿತಾ ಕಿಶೋರ್ ರವರನ್ನೂ ವಿಮಲ ಪ್ರಸಾದ್ ಹಾಗೂ ರಜನಿ ಶರತ್ ,ಸುಶೀಲಾ ರವರು ಶಾಲು ಹೊದಿಸಿ ಗೌರವಿಸಿದರು.
85%ತೆರಿಗೆ ವಸೂಲಿ ಮಾಡಿದ ಸಿಬ್ಬಂದಿ ಭರತ್ ರವರಿಗೆ ಸದಸ್ಯರಾದ ಶೌವಾದ್ ಗೂನಡ್ಕ ಶಾಲು ಹೊದಿಸಿ ಗೌರವಿಸಿದರು. ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಸನ್ಮಾನ ಪತ್ರ ನೀಡಿದರು.

ಮಾಜಿ ಗ್ರಾಂ.ಪಂ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜಾ ಸರ್ವರನ್ನು ಸ್ವಾಗತಿಸಿ ವಂದಿಸಿದರು.










