ಅಮರಪಡ್ನೂರು ಗ್ರಾಮದ ಹೊನ್ನೆಕಡ್ಪು ಸೀತಮ್ಮ ಎಂಬವರಿಗೆ ದಾನಿಗಳ ನೆರವಿನಿಂದ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸುಳ್ಯ ಲ್ಯಾಂಪ್ ಸೊಸೈಟಿಯಿಂದ ರೂ 5 ಸಾವಿರ ಧನಸಹಾಯ ನೀಡಲಾಯಿತು.















ಲ್ಯಾಂಪ್ ಸೊಸೈಟಿ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಕಣಿಪ್ಪಿಲ, ಉಪಾಧ್ಯಕ್ಷ ಪುಂಡರೀಕ ಕಾಪುಮಲೆ, ನಿರ್ದೇಶಕರಾದ ಐತ್ತಪ್ಪ ಎನ್, ಹರ್ಷಿತ್ ದೊಡ್ಡೇರಿ, ಮಿಥುನ್ ನಯ್ಕ ಕೆ, ಕಾರ್ಯದರ್ಶಿ ಚಂದ್ರಶೇಖರ ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶ್ರೀಮತಿ ಸೀತಮ್ಮರಿಗೆ ಹಣ ಹಸ್ತಾಂತರಿಸಿದರು.










