ಕೊಡಗು ಸಂಪಾಜೆ ಮದೆ ಗ್ರಾಮದ ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮವು ಇಂದು ನಡೆಯಲಿದೆ.















ಬೆಳಿಗ್ಗೆ 8 ರಿಂದ ವೈಧಿಕ ಕಾರ್ಯಕ್ರಮ ಪುಣ್ಯಹ -ನವಕಲಶ ಪ್ರತಿಷ್ಠೆ, ಗಣಪತಿ ಹೋಮ ಕಲಶ ಪೂಜೆ , ಕಲಶಾಭಿಶೇಕ ದುರ್ಗಾ ಹೋಮ, ಪರಿವಾರ ದೈವಗಳಿಗೆ ಕಲಶಾಭಿಶೇಕ, ಮದ್ಯಾಹ್ನ 12 ಕ್ಕೇ ಸರ್ವಾಲಂಕಾರ ಸಹಿತ ಮಹಾ ಪೂಜೆ , ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8 ರಿಂದ ಮಹಾಪೂಜೆ , ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ಚಾಮುಂಡೇಶ್ವರಿ ಅಮ್ಮನ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದ್ದಾರೆ.










