ಆಲೆಟ್ಟಿ ಗ್ರಾಮ ಕಾಂಗ್ರೆಸ್ ವತಿಯಿಂದ ನಾಗಪಟ್ಟಣ ಸೇತುವೆ ಬಳಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ, ದಾಳಿಯಿಂದ ಅನ್ಯಾಯವಾಗಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಮೊಂಬತ್ತಿ ಉರಿಸುವ ಮೂಲಕ ಮಾಡಲಾಯಿತು. ಗ್ರಾ. ಪಂ. ಸದಸ್ಯ ಧರ್ಮಪಾಲ ಕೊಯ0ಗಾಜೆ ಸ್ವಾಗತಿಸಿದರು.















ದಾಳಿಯಲ್ಲಿ ಅನ್ಯಾಯವಾಗಿ ಮಡಿದವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕರಾದ ಬಾಪೂಸಾಹೇಬ್ ಆರಂಬುರು, ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ತಾಲೂಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ಕೊಲ್ಚರು, ಗೋಕುಲ್ ದಾಸ್ ಸುಳ್ಯ, ನಗರ ಪಂಚಾಯತ್ ಸದಸ್ಯ ಷರೀಫ್ ಕಂಠಿ, ಮಹೇಶ್ ಬೊಲ್ಲರ್ಕರ್ ಮಾತನಾಡಿದರು.
ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸತ್ಯಕುಮಾರ ಅಡಿಂಜ ಧನ್ಯವಾದ ಮಾಡಿದರು. . ಈ ಸಂದರ್ಭದಲ್ಲಿ ಮುತ್ತಪ್ಪ ಪೂಜಾರಿ ಮೊರಂಗಲ್ಲು, ರಾಧಾಕೃಷ್ಣ ಪರಿವಾರಕನ, ಯೂಸೂಫ್ ಅಂಜಿಕ್ಕರು, ರಿಯಾಝ್ ಕಟ್ಟೆಕ್ಕಾರ್, ಅಮ್ಮು ರೈ ಆರಂಬೂರು, ಚಿದಾನಂದ ಕುಂಚಡ್ಕ, ಬಾಬೆ ಕುಡೇಕಲ್ಲು, ಆನಂದ ನಾಗಪಟ್ಟನ, ಜೀವರತ್ನ, ಹಿಮಾಂಶು ಬುತಕಲ್ಲೂ, ಕೇಶವ ಮೊರಂಗಲ್ಲೂ, ಗೋಪಾಲ ಗುಂಡ್ಯ, ವಿಜಯ ಆಲೆಟ್ಟಿ, ನವೀನ ಆಲೆಟ್ಟಿ, ತವಿದ್ ಆರಂಭೂರು, ಶಾಹಿದ್ ಪಾರೆ, ಸತ್ಯನಾರಾಯಣ ಕುಡೇಕಲ್ಲೂ, ಖಾದರ್ ಆಲೆಟ್ಟಿ, ಚಂದ್ರಶೇಖರ ಕೊಲ್ಚರ್, ನಾರಾಯಣ ರೈ ಆರಂಭರು, ಮಹಿಳೆಯರು ಮತ್ತಿತರರು ಭಾಗವಹಿಸಿದ್ದರು.










