ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಆಶ್ರಯದಲ್ಲಿ ರಾಷ್ಟ್ರಮಟ್ಟದ ಕೆವಿಜಿಸಿಇ ಹ್ಯಾಕ್‌ವೈಸ್ – 2025

0

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಕೆವಿಜಿಸಿಇ ಹ್ಯಾಕ್ ವೈಸ್ – ೨೦೨೫ ಸಮಾರಂಭವು ಏ. ೨೫ ಮತ್ತು ೨೬ರಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ‘ಬಿ’ ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾಪ್ರಸಾದ್ ಕೆ.ವಿ.ಯವರ ಸಹಕಾರದೊಂದಿಗೆ ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಸತತವಾಗಿ ೨೪ ಗಂಟೆಗಳ ಅವಧಿಯ ಸ್ಪರ್ಧೆ ನಡೆಯಿತು. ಮಹಾರಾಷ್ಟ್ರ, ಕೇರಳ, ತಮಿಳುನಾಡು ಹೀಗೆ ರಾಜ್ಯದ ನಾನಾ ಭಾಗದ ಸುಮಾರು ೯೦ ತಂಡಗಳು ನೋಂದಾಯಿಸಿ ಅದರಲ್ಲಿ ಆಯ್ಕೆಗೊಂಡ ೨೫ ತಂಡಗಳು ಭಾಗವಹಿಸಿದವು. ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಶ್ರೀ ಮೌರ್ಯ ಆರ್. ಕುರುಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ರಾಷ್ಟ್ರ ಮಟ್ಟದ ಹ್ಯಾಕ್ ವೈಸ್ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಮರ್ಥ್ಯ ಹೊರಹೊಮ್ಮಲು ಅವಕಾಶ ಕಲ್ಪಿಸಲಾಗಿದೆ ಎಂದರು. ಕ್ಯೂಆರ್ ಸ್ಟೋರ್ ಬೆಂಗಳೂರು ಇದರ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಕೇಶ್ ಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನು ತಾವೇ ಹುರಿಗೊಳಿಸಲು ಇಂತಹ ವೇದಿಕೆಗಳ ಅಗತ್ಯವಿದ್ದು ಅದನ್ನು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಹ್ಯಾಕ್ ವೈಸ್ ಸ್ಪರ್ಧೆಯನ್ನು ರಾಷ್ಟ್ರ ಮಟ್ಟದಲ್ಲಿ ನಡೆಸಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ವಿಶೇಷ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ, ಸಿಇಒ ಮತ್ತು ಸಿಬ್ಬಂದಿ ವರ್ಗದವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು.

ಸಂಸ್ಥಾಪಕರು ಮತ್ತು ಕಾರ್ಯನಿರ್ವಹಣಾಧಿಕಾರಿ buttistore.com ಶ್ರೀಮುಖ ಸಮಾರೋಪದ ಮುಖ್ಯಅತಿಥಿ ನೆಲೆಯಲ್ಲಿ ಮಾತನಾಡಿ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲಿ ಭಾಗವಹಿಸುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಸವಾಲುಗಳು ಬಂದಲ್ಲಿ ಅದನ್ನು ಎದುರಿಸುವಂತಹ ಸಾಮರ್ಥ್ಯವನ್ನು ಅವರು ಪಡೆಯಲು ಸಾಧ್ಯವಾಗುತ್ತದೆ. ರಾಷ್ಟ್ರಮಟ್ಟದ ಕೆವಿಜಿಸಿಇ ಹ್ಯಾಕ್ ವೈಸ್ ಹ್ಯಾಕಥಾನ್ ನಂತಹ ಒಳ್ಳೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡ ಕೆವಿಜಿ ಇಂಜಿನಿಯರಿಂಗ್ ಕಾಲೇಜ್‌ಗೆ ಅಭಿನಂದಿಸಿದರು. ನಿರ್ಣಾಯಕರಲ್ಲಿ ಓರ್ವರಾದ ಅನಂತ ಪಿ. ಮಲ್ಯ, Founder QuanTech Origin ಬೆಂಗಳೂರು ಇವರು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಬಾಲಕೃಷ್ಣ ಕೆ,AR Engineer, Xtendr Technologies, ಬೆಂಗಳೂರು ನಿರ್ಣಾಯಕರಾಗಿ ಸಹಕರಿಸಿದರು. ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದಂತಹ ಕೆ.ವಿ.ಜಿಸಿಇ ಸಂಸ್ಥೆಯನ್ನು ಮತ್ತು Spire Hive team

ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ. ಉಜ್ವಲ್ ಯು.ಜೆ. ಅವರು ವಿಜೇತರಿಗೆ ಪ್ರಶಸ್ತಿ ವಿತರಿಸುತ್ತಾ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪಾತ್ರವಹಿಸಿದಂತಹ ಪ್ರತೀಯೊಬ್ಬರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಮಾತನಾಡುತ್ತಾ ಕೆವಿಜಿಸಿಇ ಹ್ಯಾಕ್ ವೈಸ್ ನಂತಹ ವೇದಿಕೆಯನ್ನು ಬಳಸುತ್ತಾ ಮುಂದಿನ ದಿನಗಳಲ್ಲಿ ಉದ್ಯೋಗ ಅನ್ವೇಷಕರಾಗದೆ ಉದ್ಯೋಗ ಸೃಷ್ಠಿಸುವವರು ಆಗಬೇಕು ಎಂಬ ಕರೆಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ, ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಇಂತಹ ಕಾರ್ಯಕ್ರಮವನ್ನು ಆಯೋಜನೆಗೆ ಸಹಕರಿಸಿದ ಆಡಳಿತ ಮಂಡಳಿಗೆ ಮೆಚ್ಚುಗೆಯನ್ನು ಸೂಚಿಸುತ್ತಾ ಕಾರ್ಯಕ್ರಮದ ಒಟ್ಟು ರೂಪುರೇಶಿಯನ್ನು ಮೆಲುಕು ಹಾಕುವುದರ ಜೊತೆಗೆ ಧಣಿವರಿಯದ ನಿರ್ಣಾಯಕರನ್ನು ಪ್ರಶಂಸಿದಿದರು. ಸಂಯೋಜಕರಲ್ಲಿ ಓರ್ವರಾದ ಪ್ರೊ. ಅಭಿಜ್ಞ ಬಿ.ಬಿ ಸ್ವಾಗತಿಸಿ, ಮುಖ್ಯ ಅತಿಥಿಗಳಾದ ಶ್ರೀಮುಖ ಅವರನ್ನು Spire Hive ಸದಸ್ಯೆ ವಿದ್ಯಾರ್ಥಿನಿ ನ್ಯೂಮಾ ಸಂಶುದ್ದೀನ್ ಪರಿಚಯಿಸಿದರು. ಟ್ರೈನಿಂಗ್ & ಪ್ಲೇಸ್‌ಮೆಂಟ್ ಆಫೀಸರ್ ಪ್ರೊ. ಪ್ರಶಾಂತ್ ಕಕ್ಕಾಜೆ ನಿರ್ಣಾಯಕರನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಮೃದ್ಧಿ ಎಂ.ಡಿ ವಂದನಾರ್ಪಣೆಗೈದರು.

RNSIT ಬೆಂಗಳೂರು ತಂಡವು ಪ್ರಥಮ ಬಹುಮಾನವನ್ನು, RV College of Engineering ಬೆಂಗಳೂರು ಮತ್ತು Reva Institute of Technology & Management, ಬೆಂಗಳೂರು ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡವು. ವಿಜೇತರಿಗೆ ಒಟ್ಟು ರೂ. ೫೦,೦೦೦/- ನಗದು ಬಹುಮಾನವಾಗಿ ವಿತರಿಸಲಾಯಿತು ಅಲ್ಲದೆ ಭಾಗವಹಿಸಿದ ಎಲ್ಲಾ ತಂಡಕ್ಕೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ತಂಡದ ವಿದ್ಯಾರ್ಥಿಗಳು ಅನುಭವವನ್ನು ಹಂಚಿಕೊಂಡರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಮತ್ತು ಕಾರ್ಯಕ್ರಮದ ಸಂಚಾಲಕರಾದ ಡಾ. ಚಂದ್ರಶೇಖರ್ ಎ. ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಹ್ಯಾಕ್ ವೈಸ್‌ನ ಮುಖ್ಯ ಸಂಯೋಜಕರು ಕಿಶೋರ್ ಕುಮಾರ್ ಕೆ ಮತ್ತು ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. DUALITY, buttisotre, Suddi Sullia, .xyz, maiora  ಕಾರ್ಯಕ್ರಮದ ಯಶಸ್ಸಿನಲ್ಲಿ ಸಹಕರಿಸಿದರು. ಸಭೆಯಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ವಿದ್ಯಾರ್ಥಿವೃಂದ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.