ಗುಡ್ಡೆ – ಬಟ್ಟೆಕಜೆ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಹರಿಸೇವೆ ಮತ್ತು ಶ್ರೀ ಧರ್ಮದೈವ ಹಾಗೂ ಉಪದೈವಗಳ ವಾರ್ಷಿಕ ತಂಬಿಲ

0

ದೇವಚಳ್ಳ ಗ್ರಾಮದ ಗುಡ್ಡೆ – ಬಟ್ಟೆಕಜೆ ಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಹರಿಸೇವೆ ಮತ್ತು ಶ್ರೀ ಧರ್ಮದೈವ ಹಾಗೂ ಉಪದೈವಗಳ ವಾರ್ಷಿಕ ತಂಬಿಲವು ಎ.26 ಮತ್ತು ಎ.27 ರಂದು ನಡೆಯಿತು.

ಎ.26 ರಂದು ಬೆಳಿಗ್ಗೆ ಗಣಪತಿ ಹವನ ನಂತರ ನಾಗತಂಬಿಲ,
ಶ್ರೀ ವೆಂಕಟರಮಣ ದೇವರ ಹರಿಸೇವೆ,ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸಂಜೆ ಕೆಂಚಿರಾಯ ಪೂಜೆ ನಡೆಯಿತು.

ಎ.27 ರಂದು ಶ್ರೀ ಧರ್ಮದೈವ ಹಾಗೂ
ಉಪದೈವಗಳ ತಂಬಿಲ ನಡೆಯಿತು.