ಆಲೆಟ್ಟಿ (ನಾರ್ಕೋಡು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಎ.27 ರಂದು ಸಂಘದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಗಣಪಯ್ಯ ಆಚಾರ್ಯ ಕುದ್ಕುಳಿ, ವೆಂಕಪ್ಪ ಗೌಡ ಕುಂಚಡ್ಕ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ, ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಉಪಸ್ಥಿತರಿದ್ದರು.
















ಶಾಲೆಗೆ 100 ವರ್ಷ ಪೂರೈಸಿದ್ದು ಶತಮಾನೋತ್ಸವ ಆಚರಿಸುವ ಸಲುವಾಗಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ತೀರ್ಥಕುಮಾರ್ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ ಗಿರೀಶ್ ನಾರ್ಕೋಡು, ಕೋಶಾಧಿಕಾರಿ ರಾಮಚಂದ್ರ ಆಲೆಟ್ಟಿ, ಕಾರ್ಯದರ್ಶಿ ಕುಸುಮಾಧರ ಭೂತಕಲ್ಲು, ಸಿರಾಜುದ್ದೀನ್ ಏಣಾವರ,
ಪ್ರಧಾನ ಸಂಚಾಲಕರಾಗಿ ಚಂದ್ರಕಾಂತ ನಾರ್ಕೋಡು, ಉಪಾಧ್ಯಕ್ಷರಾಗಿ ರತ್ನಾಕರ ಗೌಡ ಕುಡೆಕಲ್ಲು, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಶ್ರೀಮತಿ ಗೋಪಮ್ಮ ಕಾಯರ್ತೋಡಿ, ಶ್ರೀಮತಿ ವನಜಾಕ್ಷಿ ಆಲೆಟ್ಟಿ, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ವಾರಿಜಾಕ್ಷಿ ಮೊರಂಗಲ್ಲು, ಶ್ರೀಮತಿ ರೇಖಾಶಾಲಿನಿ,
ಸದಸ್ಯರಾಗಿ ದೇವಯ್ಯ ಗೌಡ ಮೊರಂಗಲ್ಲು, ಸುಧಾಕರ ಆಲೆಟ್ಟಿ, ಕೋಮಲಚಂದ್ರ ಕುಡೆಕಲ್ಲು, ಅರುಣಾಚಲ ಭೂತಕಲ್ಲು, ವಸಂತ ಬಾಳೆಹಿತ್ಲು, ಹೇಮನಾಥ ನಡುಮನೆ, ರಾಜೇಶ್ ಕುಡೆಕಲ್ಲು, ಲಿಖಿನ್ ಕುಡೆಕಲ್ಲು, ನವೀನ್ ಕುಮಾರ್ ಕುಂಚಡ್ಕ, ದಿನೇಶ್ ಆಲೆಟ್ಟಿ, ಲಕ್ಷ್ಮಣ ಬಾಳೆಹಿತ್ಲು ರವರನ್ನು ಆಯ್ಕೆ ಮಾಡಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದುರ್ಗಾಪ್ರಸಾದ್ ಕುಡೆಕಲ್ಲು, ಕೋಶಾಧಿಕಾರಿ ಸಂತೋಷ್ ಕಲ್ಲೆಂಬಿ, ಜತೆ ಕಾರ್ಯದರ್ಶಿ ರಾಕೇಶ್ ಕುಡೆಕಲ್ಲು, ಉಪಾಧ್ಯಕ್ಷರಾಗಿ ಶ್ರೀಮತಿ ಸರೋಜಿನಿ ಬಾರ್ಪಣೆ, ದಿವಾಕರ ಭೂತಕಲ್ಲು, ಸಂ.ಕಾರ್ಯದರ್ಶಿ ಆಶ್ವಿನ್ ಅಡ್ಪಂಗಾಯ, ಜವಾಹರ ಕೊಯಿಂಗಾಜೆ, ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಅಜೀಜ್ ಏಣಾವರ, ಸದಸ್ಯರಾಗಿ
ಚೇತನ್ ಗುಡ್ಡೆಮನೆ, ರವಿಕುಮಾರ್ ಬಾರ್ಪಣೆ, ಸೀತಾರಾಮಮೊರಂಗಲ್ಲು, ಹರಿಪ್ರಸಾದ್ ಕಲ್ಲೆಂಬಿ, ಮಹೇಶ್ ಚೆಂಡೆಮೂಲೆ, ದಿವಾಕರ ಬೊಳ್ಳೂರು, ವಿಖ್ಯಾತ್ ಬಾರ್ಪಣೆ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಲೆಗೆ
ನೂತನ ಕಟ್ಟಡ ನಿರ್ಮಾಣದ ಸಮಿತಿ ಮತ್ತು ಆರ್ಥಿಕ ಸಮಿತಿ ರಚಿಸಲಾಯಿತು.ಶತಮಾನೋತ್ಸವ ಸಂದರ್ಭದಲ್ಲಿ ಹೊರತರಲಿರುವ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿ ರಚನೆ ಮಾಡಲಾಯಿತು. ಶಾಲೆಯ ಮುಖ್ಯ ಶಿಕ್ಷಕರು ಮತ್ತು ಅಧ್ಯಾಪಕ ವೃಂದದವರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು ಉಪಸ್ಥಿತರಿದ್ದರು.










