ಸುಳ್ಯದ ವರ್ತಕರ ಭವನದಲ್ಲಿ ಯೋಗೇನ ಚಿತ್ತಸ್ಯ ರವರ ಯೋಗ ತರಬೇತಿ ಕೇಂದ್ರ ಉದ್ಘಾಟನೆ

0

ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ನೂತನ ಯೋಗ ತರಬೇತಿ ಕೇಂದ್ರವು ಸುಳ್ಯ ಅಂಬಟೆಡ್ಕದ ವರ್ತಕರ ಭವನದಲ್ಲಿ ಮೇ.1 ರಂದು ಪ್ರಾರಂಭಗೊಂಡಿತು. ಯೋಗ ತರಬೇತಿ ಕೇಂದ್ರವನ್ನು ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ನೆಟ್ ಕಾಂ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಯೋಗಪಟು ಮೋಹನ್ ಮುಂಡಕಜೆ ಉಪಸ್ಥಿತರಿದ್ದರು. ಯೋಗ ಶಿಕ್ಷಕ ಸಂತೋಷ್ ಮುಂಡಕಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಪ್ರಶ್ವಿಜಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಯೋಗ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದರು.
ಪ್ರತಿ ಶನಿವಾರ ಸಂಜೆ ಗಂಟೆ 4 ರಿಂದ 7 ರ ತನಕ ಹಾಗೂ ಆದಿತ್ಯವಾರ ಬೆಳಗ್ಗೆ ಗಂಟೆ 7 ರಿಂದ 10 ರ ತನಕ ಪ್ರತ್ಯೇಕ ಬ್ಯಾಚ್ ಮಾಡಿ ಯೋಗ ತರಬೇತಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದರು
.