ಮೋನಪ್ಪ ಗೌಡ ಮರಂಗಳರವರಿಗೆ ಶ್ರದ್ಧಾಂಜಲಿ – ವೈಕುಂಠ‌ ಸಮಾರಾಧನೆ

0

ಬಾಳಿಲ ಗ್ರಾಮದ ಮರೆಂಗಳ ಕುಟುಂಬದ ಹಿರಿಯರು,ಪ್ರಗತಿಪರ ಕೃಷಿಕರಾದ ಮೋನಪ್ಪ ಗೌಡ ಮರೆಂಗಳರವರು ಎ.16 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠಸಮಾರಾಧನೆಯು ಮೇ.02 ರಂದು ಮರಂಗಳ ಮನೆಯಲ್ಲಿ ನಡೆಯಿತು.
ದಿವೀಶ್ ಮುರುಳ್ಯ ಮತ್ತು ದಿನೇಶ್ ಮಡಪ್ಪಾಡಿಯವರು ದಿ.ಮೋನಪ್ಪ ಗೌಡ ಮರಂಗಳರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು
ಆಗಮಿಸಿದ ನೂರಾರು ಜನರು ದಿ.ಮೋನಪ್ಪ ಗೌಡ ಮರಂಗಳರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ದೇವಕಿ , ಪುತ್ರ ಉಮೇಶ ಮರೆಂಗಳ, ಸೊಸೆ ನಳಿನಿ, ಇನ್ನೋರ್ವ ಪುತ್ರ ಸುದರ್ಶನ ಮರೆಂಗಳ ಹಾಗೂ ಸೊಸೆ ಸುಳ್ಯ ತಾಲೂಕು ಕಛೇರಿ ಸಿಬ್ಬಂದಿ ಗೀತಾ ಸುದರ್ಶನ್, ಪುತ್ರಿಯರಾದ ಶ್ರೀಮತಿ ಉಷಾ ಆನಂದ ಗೌಡ ಬನಾರಿ ದೋಳ್ಪಾಡಿ, ರಾಮಕುಂಜ ಶಾಲಾ ಶಿಕ್ಷಕಿ ಶ್ರೀಮತಿ ಜಯಶ್ರೀ ಸತೀಶ್ ಪೆರಂಗಾಜೆ , ಹಾಗೂ ಮೊಮ್ಮಕ್ಕಳು,ಕುಟುಂಬಸ್ಥರು ಉಪಸ್ಥಿತರಿದ್ದರು.