














ಗ್ರಾಮ ಮಟ್ಟದಲ್ಲಿ ಗ್ರಾಹಕರ ವಿದ್ಯುತ್ ಅದಾಲತ್ ನಡೆಸುವ ಬಗ್ಗೆ
ಮೆಸ್ಕಾಂ ಗ್ರಾಹಕ ಸಲಹಾ ಸಮಿತಿ
ದಿನೇಶ್ ಹಾಲೆಮಜಲುರವರು ಇಂಧನ ಸಚಿವರಿಗೆ ಮನವಿ ಸಲ್ಲಿಸಿ ದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ತಾಲೂಕು ಗುತ್ತಿಗಾರು ಮೆಸ್ಕಾಂ ಶಾಖೆಗೆ ಸಂಬಂಧಪಟ್ಟಂತೆ, ಗ್ರಾಮ ಮಟ್ಟದಲ್ಲಿರುವ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಪ್ರತೀ ಗ್ರಾಮದಲ್ಲಿ ವಿಶೇಷ ಅದಾಲತ್ ಅನ್ನು ನಡೆಸಲು ಉದ್ದೇಶಿಸಲಾಗಿದ್ದು, ಆದಾಲತ್ ನಲ್ಲಿ ಮಳೆಗಾಲ ಮತ್ತು ತುರ್ತು ಸಂದರ್ಭಗಳಲ್ಲಿ ರಾತ್ರಿ ಪಾಳಿಯಲ್ಲಿ ಹೆಚ್ಚುವರಿ ಮಾರ್ಗದಾಳುಗಳನ್ನು ನೇಮಿಸಿ ವಿದ್ಯುತ್ ಸಮಸ್ಯೆ ನಿವಾರಿಸುವುದು, ಹಳೆಯ ವಯರುಗಳನ್ನು ಬದಲಾವಣೆ ಮಾಡುವುದು, ಭಾಗ್ಯಜ್ಯೋತಿ ಹಾಗೂ ಇನ್ನಿತರ ಯೋಜನೆಗಳಿಂದ ಮನೆಗಳಿಗೆ ಸಂಪರ್ಕ ನೀಡಿರುವ ಅವಧಿ ಮೀರಿದ ಸರ್ವೀಸ್ ವಯರುಗಳನ್ನು ಬದಲಾಯಿಸುವ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ನೀಡುವುದು ಸೇರಿದಂತೆ ವಿದ್ಯುತ್ ಇಲಾಖೆಗೆ ಸೇರಿದ ಇನ್ನಿತರ ವಿಚಾರಗಳನ್ನು ಚರ್ಚಿಸಲು ಅತೀ ಶೀಘ್ರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಅನುಷ್ಠಾನಗೊಳಿಸಬೇಕಾಗಿ ಮನವಿಯಲ್ಲಿ ತಿಳಿಸಲಾಗಿದೆ.










