














ನಮ್ಮ ಹೆಮ್ಮೆಯ ಭಾರತೀಯ ಸೇನೆ ಆಪರೇಷನ್ ಸಿಂಧೂರ* ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ಮಾನ್ಯ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿಯವರು ಎಲ್ಲಾ ದೇಗುಲಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಮತ್ತು ಮಾತೃಭೂಮಿಗೆ ಹೋರಾಡುವ ಎಲ್ಲಾ ಸೈನಿಕರಿಗೆ ಒಳಿತಾಗಲಿ ಎಂಬ ವಿಶೇಷ ಸಂಕಲ್ಪದೊಂದಿಗೆ ಪೂಜೆ ನೆರವೇರಲಿ ಎಂಬ ಸೂಚನೆಯನ್ನು ಧಾರ್ಮಿಕ ಇಲಾಖೆ ಮುಖಾಂತರ ತಿಳಿಸಿರುತ್ತಾರೆ. ಆದುದರಿಂದ ಮೇ.8 ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ, ಮಾತೃ ಭೂಮಿಗೆ ಹೋರಾಡುವ ಎಲ್ಲಾ ಸೈನಿಕರಿಗೆ ಒಳಿತಾಗಲಿ, ಮುಂದೆ ಬರತಕ್ಕ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂಬ ಸಂಕಲ್ಪದೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯ್ತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೇಶವ ಗೌಡ ಕುದ್ವ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕಿಶೋರ್ ಕುಮಾರ್ ಪುಂಡಿಮನೆ, ಲಕ್ಷ್ಮಣ ಕುಳ್ಳಕೋಡಿ, ಧರ್ಮಪಾಲ ಕಂಡೂರು, ಲೀಲಾವತಿ ಅಳ್ಪೆ, ರವಿಕುಮಾರ್ ಚಳ್ಳಕೋಡಿ, ಜನಾರ್ಧನ್ ನಾಯ್ಕ ಪೊಳೆಂಜ, ವಿಷ್ಣು ಭಟ್ ಪೈಂದೋಡಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಭವಾನಿಶಂಕರ್ ಪಾಲೋಳಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.










