ಮಂಗಳೂರಿನ ಆಸ್ಪತ್ರೆಗೆ ದಾಖಲು
ಮದುವೆ ನಿಗದಿಯಾಗಿದ್ದ ಯುವಕನೊಬ್ಬ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಮರ್ಕಂಜ ಗ್ರಾಮದ ಸೇವಾಜೆಯಿಂದ ವರದಿಯಾಗಿದೆ.















ಮರ್ಕಂಜ ಗ್ರಾಮದ ಸೇವಾಜೆ ಜನಾರ್ದನ ಎಂಬವರಿಗೆ ಮೇ. ೧೧ರಂದು ಮದುವೆ ನಿಗದಿಯಾಗಿತ್ತು. ಮದುವೆಯ ಎಲ್ಲಾ ಸಿದ್ಧತೆಗಳು ನಡೆದಿತ್ತು. ನಾಳೆ ಮೆಹಂದಿ ಕಾರ್ಯಕ್ರಮ ನಡೆಯಲಿತ್ತು. ನಿನ್ನೆ ಬೆಳಗ್ಗಿನ ೧೦ ಗಂಟೆಯ ವೇಳೆಗೆ ಜನಾರ್ದನರವರು ವಿಷ ಸೇವಿಸಿ ಅಸ್ವಸ್ಥಗೊಂಡಿರುವುದು ಮನೆಯವರಿಗೆ ತಿಳಿಯಿತು. ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಯಿತು. ಇದೀಗ ಜನಾರ್ದನರವರು ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ವಿಷ ಸೇವನೆಗೆ ಕಾರಣ ತಿಳಿದು ಬಂದಿಲ್ಲ.









