ಭಾರತೀಯ ಸೈನಿಕರಿಗೆ ಒಳಿತಾಗುವ ನಿಟ್ಟಿನಲ್ಲಿ ಕುಂಡಡ್ಕ ಶ್ರೀ ಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಪ್ರಾರ್ಥನೆ

0

ಕುಂಡಡ್ಕ ಮುಕ್ಕೂರು ವಾರ್ಡ್ ನಾಗರಿಕ ವೇದಿಕೆಯ ಆಶ್ರಯದಲ್ಲಿ ಪಾಕಿಸ್ಥಾನದ ಉಗ್ರರ ವಿರುದ್ಧ ಆಪರೇಶನ್ ಸಿಂದೂರ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನೆಗೆ, ಎಲ್ಲ ಯೋಧರಿಗೆ ಒಳಿತಾಗುವಂತೆ ದೈವ ದೇವರು ಅನುಗ್ರಹಿಸಲಿ ಎಂದು ಕುಂಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಮತ್ತು ಪರಿವಾರ ಸಾನಿಧ್ಯ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕ್ಷೇತ್ರದ ಅನುವಂಶಿಕ ಮೊಕ್ತೇಸರ ಗುರುವ ಕುಂಡಡ್ಕ, ಆಡಳಿತ ಸಮಿತಿಯ ಚನಿಯ ಕುಂಡಡ್ಕ ಅವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಪ್ರಸಾದ್ ರೈ, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಬೆಳ್ಳಾರೆ ಸಿಎ ಬ್ಯಾಂಕ್ ನಿರ್ದೇಶಕ ನಾರಾಯಣ ಕೊಂಡೆಪ್ಪಾಡಿ, ಮುಕ್ಕೂರು-ಪೆರುವಾಜೆ ಶಾರದೋತ್ಸವ ಸಮಿತಿ ಸದಸ್ಯ ಲಿಂಗಪ್ಪ ಗೌಡ ಕುಂಡಡ್ಕ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ತಾರಾನಾಥ ಕುಂಡಡ್ಕ, ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ಇದರ ಸದಸ್ಯರಾದ ಪುಟ್ಟಣ್ಣ ಗೌಡ ಅಡ್ಯತಕಂಡ, ಕಿಶನ್ ಅಡ್ಯತಕಂಡ, ಉದ್ಯಮಿ ಮಹೇಶ್ ಕುಂಡಡ್ಕ ಸಹಿತ ಊರವರು ಉಪಸ್ಥಿತರಿದ್ದರು