ಶ್ರೀ ರಾಮಪೇಟೆಯಲ್ಲಿ ವಿಕಲಚೇತನ ಮಹಿಳೆಯ ಸ್ಕೂಟಿಗೆ ಡಿಕ್ಕಿ ಹೊಡೆದ ಟೂರಿಸ್ಟ್ ಕಾರು – ಚಾಲಕ ಕಾರು ಸಮೇತ ಪರಾರಿ

0

ಸುಳ್ಯದ ಶ್ರೀ ರಾಮ ಪೇಟೆಯಲ್ಲಿಸ್ಕೂಟಿಯೊಂದಕ್ಕೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.

ವಿಕಲಚೇತನ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ
ಸ್ಕೂಟಿಗೆ ಟೂರಿಸ್ಟ್ ಟೊಯೋಟಾ ಇಟಿಯಾಸ್ (ಕೆ.ಎ41ಸಿ 6231) ನಂಬರಿನ ಕಾರು ಹಿಂಬದಿಯ ಬಲಬದಿಯ ಚಕ್ರಕ್ಕೆ ತಾಗಿತು. ಕಾರಿನಿಂದ ಇಳಿದು ಬಂದ ಚಾಲಕ ನನ್ನ ಕಾರಿನ ಮುಂದಿನ ಬಂಪರ್ ಹಾನಿಗೊಂಡಿದೆ ಎಂದು ಹೇಳಿ ಮಹಿಳೆಯನ್ನು‌ ಹೆದರಿಸಿ ದುರಸ್ತಿ ಪಡಿಸಲು ರೂ.500 ನ್ನು ಚಾಲಕ ವಸೂಲಿ ಮಾಡಿರುತ್ತಾನೆ.
ಅಷ್ಟರಲ್ಲಿ ಜಮಾಯಿಸಿದ ಸ್ಥಳೀಯರು ಘಟನೆಯ ಕುರಿತು ವಿಚಾರಿಸಿದಾಗ ಮಹಿಳೆಯ ಕೈಯಿಂದ ಹಣತೆಗೆದುಕೊಂಡಿರುವುದನ್ನು ಆಕ್ಷೇಪಿಸಿದಾಗ ಪೋಲೀಸ್ ಠಾಣೆಗೆ ಬಂದು ಇತ್ಯರ್ಥ ಪಡಿಸುವಂತೆ ಚಾಲಕ ಹೇಳಿದ್ದಾನೆ. ಬಳಿಕ ಮಹಿಳೆ ತನ್ನ ಸ್ಕೂಟಿಯಲ್ಲಿ ಮುಂದೆ ಹೋದಾಗ ಕಾರು ಹಿಂದುಗಡೆಯಿಂದ ಬರುವುದಾಗಿ ಹೇಳಿ ನಂಬಿಸಿ ಕಾರು ಚಾಲಕ ಠಾಣೆಗೆ ಬಾರದೆ ಪರಾರಿಯಾಗಿರುತ್ತಾನೆ. ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ.