ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಪರೇಶನ್ ಸಿಂಧೂರ ಯಶಸ್ವಿ ಹಿನ್ನೆಲೆಯಲ್ಲಿ ವಿಶೇಷ ಪ್ರಾರ್ಥನೆ, ರಂಗಪೂಜೆ

0

ದೇಶಕ್ಕಾಗಿ ಶತ್ರು ದೇಶಗಳೊಂದಿಗೆ ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡುತ್ತಿರುವ ಭಾರತೀಯ ಸೈನಿಕರಿಗೆ ಇನ್ನಷ್ಟು ಶಕ್ತಿಯನ್ನು ತುಂಬಲು ಹಾಗೂ ಯುದ್ಧದ ವಿಷಯದಲ್ಲಿ ಕೋಟಿ ಕೋಟಿ ಭಾರತೀಯರ ಅಪೇಕ್ಷೆಗಳು ಈಡೇರುವಂತೆ ಪೆರುವಾಜೆಯ ಶ್ರೀ ಕ್ಷೇತ್ರ ಪೆರುವೊಡಿಯಲ್ಲಿ ವಿಶೇಷ ಪ್ರಾರ್ಥನೆ ಹಾಗೂ ರಂಗಪೂಜೆಯನ್ನು ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಆಡಳಿತ ಸಮಿತಿಯ ಅಧ್ಯಕ್ಷರಾದ ಉಮೇಶ್ ರಾವ್ , ನಿಕಟ ಪೂರ್ವ ಅಧ್ಯಕ್ಷರಾದ ಬಾಲಚಂದ್ರ ರಾವ್ ಕೊಂಡೆಪಾಡಿ, ಆಡಳಿತ ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡ ಶ್ರೀಮತಿ ಸುಜಾತ ವಿರಾಜ್, ಡಾ. ನರಸಿಂಹ ಶರ್ಮ ಕಾನಾವು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ದಯಾನಂದ ಗೌಡ ಜಾಲು, ಕ್ಷೇತ್ರದ ಭಕ್ತರುಗಳಾದ ರಾಮಚಂದ್ರ ಕೋಡಿಬೈಲು, ಸುಧೀರ್ ಕೊಂಡೆಪಾಡಿ ಮತ್ತು ಮನೆಯವರು ನಿವೃತ್ತ ಆರ್ ಐ ದಾಮೋದರ ಗೌಡ ಕಂಡಿಪಾಡಿ, ಮಂಜುನಾಥ ಗೌಡ ಕಂಡಿಪಾಡಿ, ವಿಜಯ ರೈ, ಸತ್ಯಪ್ರಸಾದ್ ಕಂಡಿಪಾಡಿ, ನಾರಾಯಣಕೊಂಡೆ ಪಾಡಿ ,ಗುಡ್ಡಪ್ಪ ಗೌಡ ಅಡ್ಯತ್ತ ತಂಡ, ಕೇಶವ ಗೌಡ ಕಂಡಿಪಾಡಿ, ಶ್ರೀಮತಿ ಶಾರದಾ ಕಿಟ್ಟಣ್ಣ ರೈ, ಪದ್ಮನಾಭ ಗೌಡ ಜಾಲು, ದಿವಾಕರ ಬೀರು ಸಾಗು, ದಿನೇಶ್ ಕರಂಬುತೋಡಿ, ಚಂದ್ರಶೇಖರ ಕಾನವು, ರೋಶಲ್ ಕಂಡಿಪಾಡಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಪೂರ್ಣಿಮಾ ಮತ್ತು ಉಮೇಶ್ ರಾವ್ ಕೊಂಡೆಪಾಡಿ ಇವರು ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನ ಕಲ್ಪಿಸಿದ್ದರು.