ವಿಕ್ರಮ ಯುವಕ ಮಂಡಲದ ಮಾಜಿ ಅಧ್ಯಕ್ಷ ಉಮೇಶ್ ಕುಳರಿಗೆ ಯುವಕ ಮಂಡಲದ ಆಶ್ರಯದಲ್ಲಿ ನುಡಿನಮನ

0

ಇತ್ತೀಚೆಗೆ ನಿಧನರಾದ ಬಳ್ಪ
ವಿಕ್ರಮ ಯುವಕ ಮಂಡಲದ ಪೂರ್ವಾಧ್ಯಕ್ಷ ಉಮೇಶ್ ಕುಳ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಯುವಕ ಮಂಡಲದ ವತಿಯಿಂದ ಮೇ. 11ರಂದು ವಿಕ್ರಮ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಯುವಕ ಮಂಡಲದ ಅಧ್ಯಕ್ಷರಾದ ಶಶಿಧರ ಎಣ್ಣೆಮಜಲು ದೀಪ ಬೆಳಗಿಸಿದರು. ಪೂರ್ವಾಧ್ಯಕ್ಷರುಗಳಾದಸುಬ್ರಹ್ಮಣ್ಯ ಕುಳ, ಆನಂದ ಚೆನ್ನಕಜೆ, ರಮಾನಂದ ಎಣ್ಣೆಮಜಲು, ಪ್ರಸನ್ನ ವೈ.ಟಿ, ನಿವೃತ್ತ ಪಾರೆಸ್ಟರ್ ಶಿವಶಂಕರ ವನಸಿರಿ, ನಿವೃತ್ತ ಸೈನಿಕ ಕುಸುಮಾಧರ ಕೋಡಿಬೈಲು ನುಡಿನಮನ ಸಲ್ಲಿಸಿ ಅಧ್ಯಕ್ಷ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು, ಯುವಕ ಮಂಡಲಕ್ಕೆ ಯುವಕರನ್ನು ಪ್ರೊತ್ಸಾಹಿಸಿ ಅಧ್ಯಕ್ಷಾವಧಿಯಲ್ಲಿ ಅವಧಿಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಸಂದರ್ಭವನ್ನು ನೆನಪುಮಾಡಿಕೊಂಡರು.

ಈ ಸಂಧರ್ಭದಲ್ಲಿ ಪೂರ್ವಾಧ್ಯಕ್ಷರುಗಳಾದ ಭಾಸ್ಕರ ಕೊರಪ್ಪಣೆ, ಶಿವಕುಮಾರ್ ಎಣ್ಣೆಮಜಲು, ಜಯರಾಮ ಆಲ್ಕಬೆ, ಧರ್ಮಶಾಸ್ತವೂ ಭಜನಾ ಮಂಡಳಿಯ ಅಧ್ಯಕ್ಷರು ಮಿಥುನ್ ರಾಜ್ ಜತ್ತಿಲ, ಚಂದ್ರಕಾಂತ ಎಮ್.ಎಮ್, ಚಿದಾನಂದ ಕಲ್ಲೇರಿ, ಸದಸ್ಯರುಗಳಾದ ಚರಣ್ ರಾಜ್ ಪೊಟ್ಟುಕೆರೆ, ಸುರೇಶ್ ಆಲ್ಕಬೆ, ತೀರ್ಥೇಶ್ವರ ಆಲ್ಕಬೆ, ರಿತೇಶ್ ಕೊರಪ್ಷಣೆ, ಪುನೀತ್ ಎಣ್ಣೆಮಜಲು, ಹರ್ಷಿತ್ ಪಂಡಿ, ಲೊಕೇಶ್ ಕೋಡಿ‌ಬೈಲು, ಯತೀಶ್ ಕಟ್ಟೆಮನೆ, ಮನೋಹರ ಜೋಗಿಮನೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಗನ್ ಕಟ್ಟೆಮನೆ ವಂದಿಸಿದರು.