ಮದ್ರಸ ಅಧ್ಯಾಪಕರ ಸೇವೆಗಳು ಶ್ಲಾಘನೀಯ – ಮುದುಗುಡ ಸಖಾಫಿ

ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಇದರ ವಾರ್ಷಿಕ ಮಹಾಸಭೆ ಹಾಗೂ ಸಾಧಕರಿಗೆ ಅಭಿನಂದನೆ,ರೇಂಜ್ ನಿಂದ ನಿರ್ಗಮಿಸುವವರಿಗೆ ಬೀಳ್ಕೊಡುಗೆ ಸಮಾರಂಭವು ನೂರುಲ್ ಇಸ್ಲಾಂ ಮದ್ರಸ ಸಭಾಂಗಣ ಮೊಗರ್ಪಣೆಯಲ್ಲಿ ನಡೆಯಿತು.
ವಿದ್ಯಾಬ್ಯಾಸ ಬೋರ್ಡ್ ತಪಾಸಣಾಧಿಕಾರಿ ಇಸ್ಮಾಯೀಲ್ ಸಅದಿ ಉರುಮಣೆ ಅಧ್ಯಕ್ಷತೆ ವಹಿಸಿ ಮೊಗರ್ಪಣೆ ಜುಮಾ ಮಸ್ಜಿದ್ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಮುದುಗುಡ ಉದ್ಘಾಟಿಸಿದರು.ಈ ಸಂಧಂರ್ಭ ಮಾತನಾಡಿ ಮದ್ರಸ ಅದ್ಯಾಪಕರ ಸೇವೆಯು ಅತ್ಯಂತ ಕ್ಲಿಷ್ಟಕರವಾದರೂ ಅದನ್ನು ನಗುಮುಖದೊಂದಿಗೆ ಸ್ವೀಕರಿಸಿ ಪುಠಾಣಿ ಮಕ್ಕಳ ಭವಿಷ್ಯ ರೂಪಿಸುವ ವಿದ್ಯೆ ನೀಡುವ ಮದ್ರಸ ಅದ್ಯಾಪಕರ ಸೇವೆ ಶ್ಲಾಘನೀಯವೂ ಮಾದರೀಯಾಗಿದೆಯೆಂದರು.
















ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ ಪ್ರಾಸ್ಥಾವಿಕ ಭಾಷಣಗೈದರು ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರ್ ವಾರ್ಷಿಕ ವರದಿ ವಾಚಿಸಿ,ಕೋಶಾಧಿಕಾರಿ ಶಾಹುಲ್ ಹಮೀದ್ ಸಖಾಫಿ ಜಾಲ್ಸೂರ್ ಲೆಕ್ಕ ಪತ್ರ ಮಂಡಿಸಿದರು.ರಿಟ್ಟೇಂನಿಂಗ್ ಆಫೀಸರ್ ಶರೀಫ್ ಸಖಾಫಿ ನೆಕ್ಕಿಲ್ ಮಹಾಸಭೆಯ ವೀಕ್ಷಕರಾಗಿ ಆಗಮಿಸಿದರು
ಮೊಗರ್ಪಣೆ ಜಮಾಅತ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಜಿ,ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ,ಕಾರ್ಯದರ್ಶಿ ಅಬ್ದುರ್ರಹೀಂ ಸಂಘಂ,ಮದ್ರಸ ಉಸ್ತುವಾರಿ ಉಸ್ಮಾನ್ ಸಿ ಯಂ,ಅಬ್ದುಸ್ಸಮದ್ ಹಾಜಿ,ಅಂದು ಶಾಂತಿನಗರ,ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಖಾಫಿ,ಸಿರಾಜುದ್ದೀನ್ ಸಖಾಫಿ ಗಾಂಧಿನಗರ,ಎಸ್ ಎಂ ಎ ಸುಳ್ಯ ರೀಜ್ಯನಲ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫೈಝಲ್ ಝುಹ್ರಿ ಕಲ್ಲುಗುಂಡಿ ಮುಂತಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.ರೇಂಜ್ ಇಂಫೋ ಸರ್ಕುಲರನ್ನು ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮಂಡಿಸಿದರು.ನಿರಂತರವಾಗಿ ಹತ್ತು ವರ್ಷಗಳಿಂದ ಮೇಲ್ಪಟ್ಟು ರೇಂಜ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಉತ್ತಮವಾಗಿ ನಿಭಾಯಿಸಿ ಇದೀಗ ನಿರ್ಗಮಿಸಿದ ನಿಝಾರ್ ಸಖಾಫಿ ಮುಡೂರ್ ರವರನ್ನು ಹಾಗೂ ಅಧ್ಯಾಪಕ ಅಬ್ದುರ್ರಹ್ಮಾನ್ ಸಅದಿ ಯವರನ್ನೂ ಬೀಳ್ಕೊಡಲಾಯಿತು.ಕಳೆದ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಗಳಲ್ಲಿ ಎ+ ಗ್ರೇಡ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕಾರಣೀಕರ್ತ ಅಧ್ಯಾಪಕರುಗಳನ್ನು ಅಭಿನಂದಿಸಲಾಯಿತು.
ಇದೇ ಸಂಧಂರ್ಭ ಪ್ರತೀ ಮದ್ರಸಗಳ ಮುಖ್ಯೋಪಾದ್ಯಯರುಗಳ ವಿಶೇಷ ಸಂಗಮ ಮುಫತ್ತಿಶ್ ಇಸ್ಮಾಯೀಲ್ ಸಅದಿ ಉರುಮಣೆ ಯವರ ನೇತೃತ್ವದಲ್ಲಿ ನಡೆಯಿತು.
ಹಸೈನಾರ್ ಸುದ್ಧಿ ಜಯನಗರ,ಹನೀಫ ಪೊಸೋಟ್,ನಾಸಿರುದ್ದೀನ್ ಡಿ ಎಚ್,ಬಶೀರ್ ಮೊದಲಾದವರು ಸಹಕರಿಸಿದರು.ರೇಂಜ್ ವ್ಯಾಪ್ತಿಯ ಮದ್ರಸ ಅದ್ಯಾಪಕರುಗಳು ಭಾಗವಹಿಸಿದರು.ನಿಝಾರ್ ಸಖಾಫಿ ಸ್ವಾಗತಿಸಿ,ಮುಹಿಯ್ಯದ್ದೀನ್ ಲತೀಫಿ ಪೆರಾಜೆ ವಂದಿಸಿದರು.










