ಸುಬ್ರಹ್ಮಣ್ಯ: ಬಡ ಕುಟುಂಬದ ಮನೆ ಮಾಡು ರಚಿಸಿದ ಮಾರಿಯಮ್ಮ ದೇವಸ್ಥಾನದ ಸಮಿತಿ

0

ಖರ್ಚು ಭರಿಸಿದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್

ಸುಬ್ರಹ್ಮಣ್ಯ ಗ್ರಾಮದ ಬಿಲದ್ವಾರ ಬಳಿಯ ಬಡ ಕುಟುಂಬದ ಮನೆಯೊಂದರ ಮಾಡನ್ನು ಇತ್ತೀಚೆಗೆ
ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಮುಖಾಂತರ ನವೀಕರಿಸಿ ಕೊಡಲಾಯಿತು.

ಬಿಲದ್ವಾರದ ಹಿಂಬಾಗ ಮನೆ ಹೊಂದಿರುವ ಕೊರಪೋಳು ಎಂಬವರು ಮನೆಯ ಮಾಡು ಸಂಪೂರ್ಣ ಶಿಥಿಲವಾಗಿ ಅದರಲ್ಲಿ ಇರುವದಕ್ಕೂ ಕಷ್ಟ ಪಡುವಂತಾಗಿತ್ತು. ಇದನ್ನು ಮನಗಂಡ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಮಾಡನ್ನು ಪುನರ್ ರಚಿಸಲಾಯಿತು. ಡಾl ರವಿ ಕಕ್ಕೆಪದವು ಇದರ ಖರ್ಚು ಭರಿಸಿದರೆ ಕುಮಾರಧಾರ ಬಳಿಯ ಮಾರಿಯಮ್ಮ ದೇವಸ್ಥಾನದ ಸಮಿತಿಯವರು ಉಚಿತವಾಗಿ ಮಾಡಿನ ಕೆಲಸ ಮಾಡಿ ಕೊಟ್ಟರು. ಅಸಾಯಕ ಸ್ಥಿತಿಯಲ್ಲಿದ್ದ ಬಡ ಮನೆಯವರಿಗೆ ಮಾಡು ನಿರ್ಮಿಸಿ ಪುಣ್ಯ ಕಾರ್ಯ ಮಾಡಿದರು.