ಬೆಳ್ಳಾರೆಯ ಡಾ. ಕೆ. ಶಿವರಾಮ ಕಾರಂತ ಕಾಲೇಜಿನ ವಾರ್ಷಿಕೋತ್ಸವ

0

ಬೆಳ್ಳಾರೆಯ ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2024 – 25 ನೇ ಸಾಲಿನ ಕಾಲೇಜಿನ ವಾರ್ಷಿಕೋತ್ಸವವು ಮೇ. 13 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರು ಹಾಗೂ ಖ್ಯಾತ ಬರಹಗಾರರಾದ ಪ್ರೊ. ನರೇಂದ್ರ ರೈ ದೇರ್ಲ ಅವರು “ಬುದ್ದಿ ಕೇಂದ್ರಿತವಾಗಿ ವಿದ್ಯಾರ್ಥಿಗಳನ್ನು ಸೆಳೆಯಬೇಕಾಗಿದ್ದ ವಿದ್ಯಾಸಂಸ್ಥೆಗಳು ಆಕೃತಿ ಕೇಂದ್ರಿತವಾಗಿ ಆಕರ್ಷಿಸುತ್ತಿರುವುದು ವಿಪರ್ಯಾಸ. ಈ ದಿನಮಾನದ ವಿದ್ಯಾರ್ಥಿಗಳಲ್ಲಿ ಚಲನಶೀಲತೆಗಿಂತಲೂ ಚಂಚಲಶೀಲತೆಯು ಹೆಚ್ಚಾಗಿದೆ ಪ್ರಸ್ತುತ ಕಾಲಘಟ್ಟದಲ್ಲಿ ಅಧ್ಯಾಪನವು ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ವಿದ್ಯಾರ್ಥಿಗಳು ತತಕ್ಷಣದ ತೃಪ್ತಿಯ ಮೂಲಗಳ ಮೇಲಿನ ಅವಲಂಬನೆಗಿಂತಲೂ ಜೀವನ ಸಂತೃಪ್ತಿಯ ಮೂಲಗಳನ್ನು ಅನ್ವೇಷಣೆ ಮಾಡುವುದು ಈ ಕಾಲದ ಅಗತ್ಯ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಬಾಲಸುಬ್ರಹ್ಮಣ್ಯ ಪಿ.ಎಸ್ ರವರು ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತ ನುಡಿಗಳನ್ನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಕರಾದ ಡಾ. ರಾಮಚಂದ್ರ .ಕೆ ಇವರು ನೆರೆದವರನ್ನು ಸ್ವಾಗತಿಸಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಸುಪ್ರಿಯಾ ಪಿ.ಆರ್ ಇವರು ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ಧನ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು .