ಕರೆಂಟ್ ಇಲ್ಲದೆ ಜನರ ಪರದಾಟ
ಸುಳ್ಯದಲ್ಲಿ ಇಂದು ದಿನಪೂರ್ತಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ರಾತ್ರಿಯಾದರೂ ವಿದ್ಯುತ್ ಬಾರದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.

ಆದರೆ ಸಂಜೆಯ ವೇಳೆ ಅಲ್ಪ ಸಮಯ ಕರೆಂಟ್ ಬಂತಾದರೂ ಅದೇ ವೇಳೆ ಜಾಲ್ಸೂರು ಸಮೀಪ ಕದಿಕಡ್ಕ ಎಂಬಲ್ಲಿ ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ಲೈನ್‌ನ ವಯರ್ ಕಟ್ ಆಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು.















ಬೆಳಿಗ್ಗೆಯಿಂದ ಕರೆಂಟ್ ಗಾಗಿ ಕಾದಿದ್ದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ವಿದ್ಯುತ್ ಸರಬರಾಜು ಮರುಸ್ಥಾಪನೆಗೊಳ್ಳುವಾಗ ಸುಮಾರು 9.30 ಆಗುವ ಸಾಧ್ಯತೆ ಇದೆ ಎಂದು ಮೆಸ್ಕಾಂ ಇಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.
33 ಕೆ.ವಿ ಕಾವು-ಸುಳ್ಯ ವಿದ್ಯುತ್ ಲೈನ್‌ಗಳಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡ ಕಾರಣ ಮೇ.16ರಂದು ದಿನ ಪೂರ್ತಿ ಸುಳ್ಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸಂಜೆಯ ವೇಳೆಗೆ ಒಮ್ಮೆ ವಿದ್ಯುತ್ ಚಾರ್ಜ್ ಆದರೂ ಮತ್ತೆ ಕಡಿತವಾಗಿದ್ದು ಜನರು ಕತ್ತಲಲ್ಲಿ ಕಳೆಯುವ ಸ್ಥಿತಿ ಉಂಟಾಗಿದೆ.










