














ಬೆಳ್ಳಾರೆಯ ಶ್ರೀ ಸದಾಶಿವ ವೇದಪಾಠಶಾಲೆಯಲ್ಲಿ ಶರತ್ ಜೋಶಿ ಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಸಭಾಭವನ ಲೋಕಾರ್ಪಣೆ ಮತ್ತು ಶ್ರೀ ಸದಾಶಿವ ವೇದ ಶಿಬಿರ ಸಮಾರೋಪ ಮೇ. 17ರಂದು ನಡೆಯಲಿದೆ.
ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಅಧ್ಯಕ್ಷರಾಗಿರುವ ಬಿ. ಸುಬ್ರಹ್ಮಣ್ಯ ಜೋಶಿಯವರು ತಮ್ಮ ಪುತ್ರ ಶರತ್ ಜೋಶಿಯವರ ಸ್ಮರಣಾರ್ಥವಾಗಿ ಶರತ್ ಜೋಶಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಸಭಾಭವನವನ್ನು ನಿರ್ಮಾಣ ಮಾಡಿದ್ದು, ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿಗೆ ಹಸ್ತಾಂತರ ಮಾಡಲಿದ್ದಾರೆ. ಇದರೊಂದಿಗೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ವೇದ ಶಿಬಿರದ ಸಮಾರೋಪ ಸಮಾರಂಭವೂ ನಡೆಯಲಿದೆ ಎಂದು ಬಿ. ಸುಬ್ರಹ್ಮಣ್ಯ ಜೋಶಿ ತಿಳಿಸಿದ್ದಾರೆ.










