ಅರಂತೋಡು ಕಾಮಧೇನು ಹೋಟೆಲ್ ಹತ್ತಿರ ತಿರುವಿನಲ್ಲಿ ಕಾರುಗಳ ಮಧ್ಯೆ ಪರಸ್ಪರ ಡಿಕ್ಕಿಯಾದ ಘಟನೆ ಮೇ 18 ರಂದು ಸಂಭವಿಸಿದೆ.















ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಟ್ಯಾಕ್ಸಿ ಕಾರು ಮತ್ತು ಆರಂತೋಡಿನಿಂದ ಸಂಪಾಜೆ ಕಡೆ ಹೋಗುತ್ತಿದ್ದ ಆಲ್ಟೋ ಕಾರಿನ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾರುಗಳೆರಡು ಜಖಂ ಗೊಂಡಿದೆ.










