ಬೆಳ್ಳಾರೆ: ಶರತ್ ಜೋಶಿ ಸಭಾಭವನ ಲೋಕಾರ್ಪಣೆ, ವಸಂತ ವೇದ ಶಿಬಿರ ಸಮಾರೋಪ

0

ಶ್ರೀ ಸದಾಶಿವ ವೇದ ಪಾಠಶಾಲಾ ಬೆಳ್ಳಾರೆ ಆಶ್ರಯದಲ್ಲಿ ‘ ಶರತ್ ಜೋಶಿ ಸಭಾಭವನ ‘ ಲೋಕಾರ್ಪಣೆ ಮತ್ತು ವಸಂತ ವೇದ ಶಿಬಿರ ಸಮಾರೋಪ ಸಮಾರಂಭ ಮೇ. 17ರಂದು ನಡೆಯಿತು.

ಪೂರ್ವಾಹ್ನ ಗಣಪತಿ ಹವನ, ಸರಸ್ವತಿ ಪೂಜೆ ನಡೆಯಿತು. ಅಪರಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ವೇl ಬ್ರl ಕೇಶವ ಜೋಯಿಸರು , ಕರುವಾಜೆ ದೀಪ ಪ್ರಜ್ವಲನೆ ಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಮತ್ತು ಕುಟುಂಬದವರು ಶರತ್ ಜೋಶಿ ಸ್ಮರಣಾರ್ಥವಾಗಿ ಶಿಶು ಮಂದಿರದ ಕಟ್ಟಡದ ಮೇಲ್ಛಾವಣಿಯನ್ನು ಸುಮಾರು 5 ಲಕ್ಷ ವೆಚ್ಚದೊಂದಿಗೆ ‘ ಶರತ್ ಜೋಶಿ ಮೆಮೋರಿಯಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಕೊಡುಗೆ ‘ ಶರತ್ ಜೋಶಿ ಸಭಾಭವನ ‘ ವನ್ನು ಕೊಡುಗೆಯಾಗಿ ನೀಡಿದ್ದು, ಡಾ. ಪಾದೆಕಲ್ಲು ವಿಷ್ಣು ಭಟ್ ಅನಾವರಣಗೊಳಿಸಿ ಮಾತನಾಡಿ, ಕೊಡುಗೆಯಾಗಿ ನೀಡಿದ ಈ ಸಭಾಭವನವನ್ನು, ಸಮಾಜವು
ಸದ್ಬಳಕೆಗೊಳಿಸುವುದರ ಮುಖೇನ ಸಮಾಜವು ಬೆಳವಣಿಗೆ ಕಾಣಬೇಕು. ವೇದ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿ ಕಾರ್ಯಗತಗೊಳಿಸಿದ ಸಂಸ್ಥೆಯನ್ನು ಶ್ಲಾಘಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಡಾ. ಪಾದೆಕಲ್ಲು ವಿಷ್ಣು ಭಟ್ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೈದಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬ್ರಹ್ಮಶ್ರೀ ಮಿತ್ತೂರು ಸಂಪ್ರತಿಷ್ಠಾನದ ಉಪಾಧ್ಯಕ್ಷರಾದ ವೇl ಬ್ರl ಮಿತ್ತೂರು ಸದಾಶಿವ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಾಧಕರಾದ ಶ್ರೀಯಾನ್ ಕಾವಿನಮೂಲೆ, ಕುl ಚೈತ್ರ ಕಾವಿನಮೂಲೆ ಹಾಗೂ ಕುl ತ್ರಯಿ ಭಟ್ ಕೊಳಾರಿರವರನ್ನು ಅಭಿನಂದಿಸಲಾಯಿತು.ವೇದ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನಗೈಲಾಯಿತು. ಸಭಾಭವನವನ್ನು ನಿರ್ಮಾಣ ಮಾಡಿದ ಮೇll ಪಾಲಾರ್ ಕನ್ ಸ್ಟ್ರಕ್ಷನ್ ಪುತ್ತೂರು ಇದರ ವಿಜಯ ಸುಬ್ರಹ್ಮಣ್ಯ ಪಾಲಾರ್ ರವರನ್ನು ಅಭಿನಂದಿಸಲಾಯಿತು.ಶಿಬಿರದ ಅಧ್ಯಾಪಕ ವೇl ಮೂl ವೇಣುಗೋಪಾಲ್ ರನ್ನು ‘ ಗುರು ಕಾಣಿಕೆ ‘ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಗೌರವ ಉಪಸ್ಥಿತರಿದ್ದ ಸಂಸ್ಥೆಯ ಸ್ಥಾಪಕಧ್ಯಕ್ಷ ಪಿ. ಯಸ್. ಚಿದಾನಂದ ರಾವ್ ಹಾಗೂ ಇನ್ನೋರ್ವ ಅತಿಥಿ ಬೆಳ್ಳಾರೆ ವಲಯ ಹವ್ಯಕವ ಸಮಿತಿಯ ಅಧ್ಯಕ್ಷ ಮಾಧವ ಭಟ್ ಶೃಂಗೇರಿ ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರೀರಾಮ ಪಾಟಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.