
ಅಲೆಕ್ಕಾಡಿ – ಪಾರ್ಲ ರಸ್ತೆಗೆ ಶಾಸಕರ ಅನುದಾನದಲ್ಲಿ ಅಭಿವೃದ್ಧಿಗೆಂದು ರಸ್ತೆ ಅಗೆದು ಆ ಭಾಗದ ಜನರಿಗೆ ತೊಂದರೆಯಾಗಿದೆ.
















ರಸ್ತೆಯನ್ನು ಆಳೆತ್ತರ ಅಗೆದು ಹೊಂಡ ಮಾಡಿ ರಸ್ತೆ ತೋಡಿನಂತಾಗಿದೆ. ನಮಗೆ ಮೊದಲಿನಂತೆ ರಸ್ತೆಯನ್ನು ಮಾಡಿಕೊಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆಯ ಫಲಾನುಭವಿಗಳು ಪಂಚಾಯತಿನಲ್ಲಿ ವಿಚಾರಿಸಿದಾಗ ತಳಕ್ಕೆ ಬಂದು ಪರಿಶೀಲಿಸಿ, ನಮಗೆ ವಿಷಯವೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ಅಗೆದು ಹಾಕಿ ಈ ಮಳೆಗಾಲದಲ್ಲಿ ನಡೆದಾಡಲು ಸಾಧ್ಯವಿಲ್ಲದಂತಾಗಿದೆ.










