ಗುತ್ತಿಗಾರು: ಕಾರು – ಬೈಕ್ ಅಪಘಾತ, ಬೈಕ್ ಸವಾರನಿಗೆ ಗಾಯ

0

ಗುತ್ತಿಗಾರಿನಲ್ಲಿ ಕಾರು – ಬೈಕ್ ಅಪಘಾತ ನಡೆದು ಬೈಕ್ ಸವಾರನಿಗೆ ಗಾಯವಾದ ಘಟನೆ ಮೆ.20 ರ ಸಂಜೆ ನಡೆದಿದೆ.

ಗುತ್ತಿಗಾರು ಕಡೆ ಬರುತಿದ್ದ ಹರೀಶ್ ಉಬರಡ್ಕರ ಕಾರು ಮತ್ತು ಪೆಟ್ರೋಲ್ ಬಂಕ್ ನಿಂದ ಹೊರಟು ಮೇಲಿನ ಪೇಟೆ ಕಡೆ ಹೊರಟ ದೀಪಕ್ ಚಿಲ್ಪಾರು ಎಂಬವರ ಬೈಕ್ ಪರಸ್ಪರ ಡಿಕ್ಕಿ ಹೊಡೆದಿದ್ದು ಬೈಕ್ ಸವಾರನಿಗೆ ಗಾಯವಾಗಿರುವುದಾಗಿ ವರದಿಯಾಗಿದೆ. ಬೈಕ್ ನಲ್ಲಿದ್ದ ದೀಪಕ್ ರ ತಂಗಿಗೂ ಅಲ್ಪ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.