ಸುಳ್ಯ ಚರ್ಚ್ ನಲ್ಲಿ ವಿಶೇಷ ಪೂಜೆಯೊಂದಿಗೆ ರೆ.ಪಾ.ಅಲ್ವಿನ್ ಎಡ್ವರ್ಡ್ ಡಿಕುನ್ಹ ಅಧಿಕಾರ ಸ್ವೀಕಾರ
ನಿರ್ಗಮನ ಪಾ.ವಿಕ್ಟರ್ ಡಿಸೋಜರಿಂದ ಚರ್ಚ್ ಭಾಂದವರಿಗೆ ಕೃತಜ್ಞತೆ ಅರ್ಪಣೆ

ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಧರ್ಮಗುರುಗಳಾಗಿ, ಸೈಂಟ್ ಜೋಸೆಫ್ ಅಂಗ್ಲಮಾಧ್ಯಮ ಶಾಲೆ ಹಾಗೂ ಸೈಂಟ್ ಬ್ರಿಜಿಡ್ಸ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕರಾಗಿ ಕಳೆದ ಆರು ವರ್ಷಗಳಿಂದ ಸುಳ್ಯದಲ್ಲಿ ಸೇವೆಸಲ್ಲಿಸಿದ ರೆ.ಪಾ.ವಿಕ್ಟರ್ ಡಿಸೋಜ ರವರು ಬಂಟ್ವಾಳದ ಮೊಡಂಕಾಪು ವರ್ಗಾವಣೆಗೊಂಡು ತೆರಳುತ್ತಿರುವ ಸಂದರ್ಭದಲ್ಲಿ ಚರ್ಚ್ ಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಚರ್ಚ್ ಸಭಾಂಗಣದಲ್ಲಿ ವಿಶೇಷ ಪಾರ್ಥನೆಯೊಂದಿಗೆ ಬಿಳ್ಕೋಡುಗೆ ಹಾಗೂ ನೂತನ ಧರ್ಮಗುರುಗಳಾಗಿ ಮಂಗಳೂರಿನ ವೈಟ್ ಡೌಸ್ ನಿಂದ ಆಗಮಿಸಿದ ರೆ.ಪಾ.ಅಲ್ವಿನ್ ಎಡ್ವರ್ಡ್ ಡಿಕುನ್ಹಾ ರವರಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.

ಬಿಷಪ್ ರವರ ಪ್ರತಿನಿಧಿಯಾಗಿ ಪುತ್ತೂರು ವಲಯದ ಧರ್ಮಗುರುಗಳಾದ ರೆ.ಪಾ.ಲಾರೆನ್ಸ್ ಮಸ್ಕರೇನಸ್ ನೂತನ ಧರ್ಮಗುರುಗಳಿಗೆ ಅಧಿಕಾರ ವಹಿಸಿಕೊಟ್ಟು ಶುಭ ಹಾರೈಸಿದರು.















ವೈಟ್ ಡೌಸ್ ನ ಚಾಪ್ಲೈನ್ ವೆಲೆರಿಯನ್ ಪ್ರಾಂಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚರ್ಚ್ ಪಾಲನ ಸಮಿತಿ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳು, ಶಿಕ್ಷಕ ವೃಂದ,ಪೋಷಕರು ಕೆಥೋಲಿಕ್ ಸಭೆಯ ಅಧ್ಯಕ್ಷರು ಮತ್ತು ಪಧಾದಿಕಾರಿಗಳು, ಕೆಥೊಲಿಕ್ ಸಭಾದ ಸ್ತ್ರೀ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಸಂತ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಅಧ್ಯಕ್ಷರು ಪಧಾದಿಕಾರಿಗಳು, ಭಾರತೀಯ ಕ್ಯಾಥೊಲಿಕ್ ಯುವ ಸಂಚಲನ ಸಮಿತಿ, ವೈಸಿಎಸ್ ಸಮಿತಿ, ಅಲ್ಟರ್ ಬಾಯ್ಸ್ & ಗರ್ಲ್ಸ್ ವತಿಯಿಂದ ಅಲ್ಲದೆ ಅನೇಕ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದದಲ್ಲಿ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ,
ಸೈಂಟ್ ಬ್ರಿಜಿಡ್ಸ್ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಅಂತೋನಿ ಮೇರಿ,ಸೈಂಟ್ ಜೊಸೆಫ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ,ಸೈಂಟ್ ರೈಮಂಡ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಗ್ರೇಸಿ, ಮಂಗಳೂರು ವೈಟ್ ಡೌಸ್ ಸ್ಥಾಪಕ ಸದಸ್ಯರಾದ ಕೊರಿನ್ ರಸ್ಕ್ಯೂನಿಹ,ವೈಟ್ ಡೌಸ್ ವ್ಯವಸ್ಥಾಪಕ ಜೆರಾಲ್ಡ್ ಫರ್ನಾಂಡೀಸ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚರ್ಚ್ ಬಾಂದವರು ಉಪಸ್ಥಿತರಿದ್ದರು.

ಚರ್ಚ್ ವ್ಯಾಪ್ತಿಯ 21 ಆಯೋಗಗಳ ಸಂಚಾಲಕಿ ಕವಿತಾ ಸ್ವಾಗತಿಸಿದರು
ನ.ಪಂ ಸದಸ್ಯರಾದ ಡೇವಿಡ್ ದೀರಾ ಕ್ರಾಸ್ತ ಸೇರಿದಂತೆ ಅನೇಕ ಚರ್ಚ್ನ ಹಿತೈಷಿಗಳು ನೂತನ ಧರ್ಮಗುರುಗಳನ್ನು ಸ್ವಾಗತಿಸಿ ಶುಭ ಹಾರೈಸಿದರು..
ಚರ್ಚ್ ಪಾಲನ ಸಮಿತಿ ಕಾರ್ಯದರ್ಶಿ ಜೂಲಿಯಾನ ಕ್ರಾಸ್ತ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಮಾಡಿದರು.










