ಆರ್ತಾಜೆ ಬಳಿ ಏಕಾಏಕಿ ಮುರಿದು ಬಿದ್ದ ಮನೆಯ ಮೇಲ್ಛಾವಣಿ ಸೀಟುಗಳು

0

ಮನೆ ಸಾಮಾಗ್ರಿಗಳಿಗೆ ಹಾನಿ, ತಪ್ಪಿದ ಭಾರಿ ಅನಾಹುತ

ಸುಳ್ಯದ ಜಾಲ್ಸೂರು ಗ್ರಾಮದ ಆರ್ತಾಜೆ ಬಳಿ ಮರಿಯಮ್ಮ ಎಂಬುವವರ ಮನೆಯ ಹಿಂಭಾಗದ ಮೇಲಿನ ಸೀಟ್‌ಗಳು ಏಕಾಏಕಿ ಮುರಿದು ಬಿದ್ದು ಮನೆಯಲ್ಲಿ ಇದ್ದ ಪಾತ್ರೆ ಸಾಮಾಗ್ರಿಗಳು ನಷ್ಟ ಉಂಟಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.


ಮನೆಯ ಹಿಂಭಾಗದಲ್ಲಿ ಬೇರೆಯವರ ಜಾಗದ ಹಲಸಿನ ಮರದ ಕೊಂಬೆಗಳು ಈ ಮನೆಯ ಶೀಟಿನ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿ ನಿಂತಿದ್ದು ಈ ಮರದಿಂದ ಬೀಳುವ ಎಲೆಗಳು ಹಾಗೂ ಸಣ್ಣಪುಟ್ಟ ಗೆಲ್ಲುಗಳು ಸೀಟಿನ ಮೇಲೆ ಬಿದ್ದಿದ್ದು, ಕಳೆದ ಕೆಲವು ದಿನಗಳಿಂದ ಬಂದ ಮಳೆಗೆ ಈ ಎಲೆ ಹಾಗೂ ಇನ್ನಿತರ ವಸ್ತುಗಳು ನೀರಿನಂದ ನೆನೆದು ಅದರ ತೂಕವನ್ನು ಸಹಿಸದೆ ಸೀಟು ಏಕಾಏಕಿ ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ.


ಈ ಘಟನೆಯಿಂದ ಮನೆಯಲ್ಲಿದ್ದ ವಾಷಿಂಗ್ ಮಷೀನ್ ಹಾಗೂ ಇನ್ನಿತರ ಪಾತ್ರೆ ಸಾಮಾಗ್ರಿಗಳು ಹಾನಿಯಾಗಿದ್ದು ತುಂಬಾ ನಷ್ಟ ಉಂಟಾಗಿದೆ.


ಈ ಸ್ಥಳದಲ್ಲಿ ಮಕ್ಕಳು ಆಟವಾಡುತ್ತಿರುವಂತಹ ಜಾಗವಾಗಿದ್ದು ಘಟನೆ ನಡೆದ ಸಂದರ್ಭದಲ್ಲಿ ಆ ಜಾಗದಲ್ಲಿ ಮಕ್ಕಳು ಯಾರು ಇರಲಿಲ್ಲ ಎನ್ನಲಾಗಿದೆ ಆದರೆ ಮುರಿದು ಬೀಳುವ ಶಬ್ದ ಕೇಳಿ ಅಲ್ಲಿಂದ ಓಡಿದ ಮರಿಯಮ್ಮರವರ ಕೈಗೆ ಸೀಟಿನ ಪೀಸು ಬಿದ್ದಿದ್ದು ಕೈಗೆ ಅಲ್ಪಮಟ್ಟಿಗೆ ಗಾಯಗಳಾಗಿದೆ. ಈ ಮರ ತೆರವಿಗಾಗಿ ಅನೇಕ ಭಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನೆಯ ಸದಸ್ಯರು ಸುದ್ದಿಗೆ ತಿಳಿಸಿದ್ದಾರೆ.