ಮೇ 31- ಜೂ.1 ; ಮುರುಳ್ಯ ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರ ಕಾಳಿ ದೇವಸ್ಥಾನದಲ್ಲಿ ಪ್ರತಿಷ್ಠಾವರ್ಧತ್ಯುಂತ್ಸವ

0

ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕ ಪರಮೇಶ್ವರಿ ಭದ್ರ ಕಾಳಿ ದೇವಸ್ಥಾನದಲ್ಲಿ ಮೇ 31 ಮತ್ತು ಜೂನ್ 1 ರಂದು ಮೂಡಬಿದ್ರೆ ವೇದಮೂರ್ತಿ ಕೇಶವ ತಂತ್ರಿ ಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿರುವುದು.
ಮೇ 31ರಂದು ಬೆಳಿಗ್ಗೆ 10 ಗಂಟೆಗೆ ಹಸಿರು ಕಾಣಿಕೆ ಸಮರ್ಪಣೆ ಗೊಳ್ಳಲಿರುವುದು, 11ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿರುವುದು ಬಳಿಕ ದೇವಳದ ಸುತ್ತು ಪೌಳಿ ಪ್ರಾರಂಭ ಮುಹೂರ್ತ ಕಾರ್ಯಕ್ರಮ ನಡೆಯಲಿರುವುದು. ಸಂಜೆ ವಾಸ್ತು ರಾಕ್ಷೋಘ್ನ, ನವಗ್ರಹ ಹೋಮ, ವಾಸ್ತು ಬಲಿ, ದಿಗ್ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಜೂನ್ 1ರಂದು ಗುರುಗಣಪತಿ ಪೂಜೆ, ಪನ್ಯಹವಾಚನ ಗಣಪತಿ ಹೋಮ, ನಾಗ ಅಭಿಷೇಕ, ಬಳಿಕ ಶ್ರೀ ದೇವರಿಗೆ ನವಕ ಕಲಾಹೋಮ, ಕಲಾಶಾಭಿಷೇಕ, ಪ್ರಸನ್ನ ಪೂಜೆ, ಭದ್ರಕಾಳಿ ಹೋಮ, ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯ ಕ್ರಮ, ಬಳಿಕ ಎಡಮಂಗಲ ಲಕ್ಷ್ಮಣ ಆಚಾರ್ಯರ ಬಳಗದವರಿಂದ ಪಾಪಣ್ಣ ವಿಜಯ ಗುಣ ಸುಂದರಿ ಎಂಬ ಯಕ್ಷಗಾನ ಬಯಲಾಟ ನಡೆಯಲಿರುವುದು

(ವರದಿ; ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ)