ಶರೀರದ ಹಲವು ಕಾಯಿಲೆಗಳಿಗೆ ಗೋಉತ್ಪನ್ನ ರಾಮಬಾಣ : ಡಾ. ರಮೇಶ್
” ಮನುಷ್ಯನ ಶರೀರಕ್ಕೆ ಬೇಕಾದ ಪೌಷ್ಟಿಕಾಂಶಗಳು ಹೇರಳವಾಗಿ ದೊರೆಯುವಂತದ್ದು ದನದ ಹಾಲಿನಿಂದ. ಅದರಲ್ಲೂ ಮಲೆನಾಡು ಗಿಡ್ಡ ತಳಿಯ ದನದ ಹಾಲು ಅಮೃತ ಸಮಾನ. ಹಲವು ಕಾಯಿಲೆಗಳಿಗೆ ಗೋಉತ್ಪನ್ನಗಳು ರಾಮಬಾಣವಾಗಿದೆ” ಎಂದು ಬೆಂಗಳೂರಿನ ನ್ಯಾಷನಲ್ ಡೈರಿ ಸಂಶೋಧನಾ ಸಂಸ್ಥೆಯ ಫಾರ್ಮರ್ ಹೆಡ್ ಡಾ. ಕೆ.ಪಿ.ರಮೇಶ್ ಹೇಳಿದರು.
















ಅವರು ಮೇ. 25 ರಂದು ಸುಳ್ಯದ ಕೆವಿಜಿ ಆಯುರ್ವೇದ ಫಾರ್ಮಾದಲ್ಲಿ
ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನ ಮತ್ತು ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ವೆಬ್ ಸೈಟ್ ಅನಾವರಣ, ಗೋಪೂಜೆ ಮತ್ತು ಗೋವುಗಳ ಹಸ್ತಾಂತರ ಕಾರ್ಯಕ್ರಮ ಅತಿಥಿಯಾಗಿ ಭಾಗವಹಿಸಿ ಮಲೆನಾಡು ಗಿಡ್ಡ ತಳಿಯ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಕುಸುಮಾವತಿ ಬಿ. ಆಳ್ವ ಆರತಿ ಎತ್ತಿ ಗೋಪೂಜೆ ನೆರವೇರಿಸಿದರು. ಬಳಿಕ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಅಧ್ಯಕ್ಷ ಸದಾಶಿವ ಭಟ್ ಮರಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡುತ್ತಾ ” ಗೋವುಗಳಿಗೆ ಮತ್ತು ಆಯುರ್ವೇದಕ್ಕೆ ನಿಕಟ ಸಂಬಂಧವಿದೆ. ಗೋ ಉತ್ಪನ್ನಗಳ ಪ್ರಯೋಜನದ ಬಗ್ಗೆ ಪಠ್ಯದಲ್ಲಿ ವಿವರಣೆಗಳಿವೆ. ಗೋ ಉತ್ಪನ್ನಗಳಲ್ಲಿ ಇರುವ ಔಷಧೀಯ ಗುಣಗಳು, ಪೌಷ್ಟಿಕತೆ ಬೇರೆ ಯಾವುದೇ ಆಹಾರದಲ್ಲಿ ಸಿಗುವುದಿಲ್ಲ. ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆಯಲ್ಲಿ ನಾವೆಲ್ಲರೂ ಕೈಜೋಡಿಸೋಣ” ಎಂದರು.
ಎ.ಒ.ಎಲ್.ಇ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ವೆಬ್ ಸೈಟ್ ಅನಾವರಣಗೊಳಿಸಿದರು. ಇಂಜಿನಿಯರ್ ಪ್ರಮೋದ್ ಈ ವೆಬ್ಸೈಟನ್ನು ವಿನ್ಯಾಸಗೊಳಿಸಿದ್ದಾರೆ.
ಮಾಜಿ ಸಚಿವ ಎಸ್. ಅಂಗಾರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಕೆ.ವಿ.ಕೆ. ನಿವೃತ್ತ ಚಾನ್ಸಲರ್ ಡಾ.ವಿಶ್ವನಾಥ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಘಟಕರಲ್ಲಿ ಓರ್ವರಾದ ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪುರುಷೋತ್ತಮ ಕೆ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದು, ಕೆವಿಜಿ ಆಯುರ್ವೇದ ಫಾರ್ಮಾದಲ್ಲಿ ಉತ್ಪಾದಿಸುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಸಂಘಟಕ ಅಕ್ಷಯ್ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾದ್ಯಾಪಕಿ ಡಾ. ಹರ್ಷಿತಾ ಪುರುಷೋತ್ತಮ್ ಸ್ವಾಗತಿಸಿ, ಸಂಘಟಕರಲ್ಲಿ ಓರ್ವರಾದ ಕೆ.ಪ್ರಸನ್ನ ಎಣ್ಮೂರು ವಂದಿಸಿದರು. ದೀಪ್ತಿ, ವೈಶಾಲಿ ಮತ್ತು ಪ್ರಸನ್ನ ಪ್ರಾರ್ಥನೆಗೈದರು. ಎನ್.ಎಂ.ಪಿ.ಯು. ಉಪನ್ಯಾಸಕಿ ಕು. ಬೇಬಿ ವಿದ್ಯಾ ವಂದಿಸಿದರು.










