ಚಲಿಸುತ್ತಿದ್ದ ಕಾರಿನ ಮೇಲೆ ಮರದ ಗೆಲ್ಲು ಬಿದ್ದು ಜಖಂ

0


ಚಲಿಸುತ್ತಿದ್ದ ಕಾರಿನ ಮೇಲೆ ಮರದ ಗೆಲ್ಲು ಬಿದ್ದು ಕಾರಿನ ಮುಂಭಾಗ ಜಖಂಗೊಂಡ ಘಟನೆ ಅರಂತೋಡಿನಿಂದ ತೊಡಿಕಾನಕ್ಕೆ ಹೋಗುವ ರಸ್ತೆ ಮಧ್ಯೆ ಪಡ್ಪು ಎಂಬಲ್ಲಿ ಸಂಭವಿಸಿದೆ.

ಅರಂತೋಡಿನಿಂದ ತೊಡಿಕಾನಕ್ಕೆ ಗೋವರ್ಧನ ಬೊಳ್ಳೂರುರವರು ಹೋಗುತ್ತಿದ್ದಾಗ ಪಡ್ಪು ಬಳಿ ಮರದ ಗೆಲ್ಲೊಂದು ಮುರಿದು ಕಾರಿನ ಮೇಲೆ ಬಿತ್ತು. ಪರಿಣಾಮ ಕಾರಿನ ಮುಂಭಾಗದ ಗ್ಲಾಸ್ ಜಖಂಗೊಂಡಿದೆ. ಕಾರಿನಲ್ಲಿ ಗೋವರ್ಧನರವರು ಮಾತ್ರ ಇದ್ದು, ಯಾವುದೇ ಅಪಾಯ ಸಂಭವಿಸಿಲ್ಲ.