ಮೊಗರ್ಪಣೆ ಎಕ್ಸಲೆನ್ಸ್ ಶೀ ಕ್ಯಾಂಪಸ್ಸಿಗೆ ಎನ್ ಟಿ ಸಿ ಸಿ ಅಧಿಕಾರಿಗಳ ಭೇಟಿ : ಪರಿಶೀಲನೆ, ಸಂಸ್ಥೆ ಬಗ್ಗೆ ಮೆಚ್ಚುಗೆ

0

ಸುಳ್ಯದ ಮೊಗರ್ಪಣೆಯಲ್ಲಿ ಕಾರ್ಯಚರಿಸುತ್ತಿರುವ ಎಕ್ಸಲೆನ್ಸ್ ಶೀ ಕ್ಯಾಂಪಸ್ ಮಹಿಳಾ ಕಾಲೇಜಿಗೆ ಎನ್ ಟಿ ಸಿ ಸಿ ಅಧಿಕಾರಿಗಳು ಭೇಟಿ ನೀಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಕಾಲೇಜಿನ ಉಪನ್ಯಾಸಕರುಗಳ ಬಗ್ಗೆ ಮಾಹಿತಿ ಪಡೆದು ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲಿ ಸತತವಾಗಿ 2 ವರ್ಷ ಶೇಕಡಾ 100 ಫಲಿತಾಂಶ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಅಧಿಕಾರಿ ಗಳಾದ ವಿವೇಕ್ ಆಚಾರ್ಯ ಮಂಗಳೂರು, ಅನ್ಸಾರ್ ಮೂಡಬಿದ್ರೆ, ಎಚ್ ಐ ಜೆ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕ್ಯಾಂಪಸ್ ಉಸ್ತುವಾರಿ ಹಾಜಿ ಅಬ್ದುಲ್ ಸಮದ್ ಹಾಗೂ ಸಂಸ್ಥೆ ಯ ಪ್ರಾಂಶುಪಾಲೆ ಖದೀಜ ಅಜ್ಮಾ ಮಂಷಾದ್, ಉಪನ್ಯಾಸಕರುಗಳಾದ ರೆಹಾನ, ಸಫ್ನ ಶರೀನ್,ಶಿಕ್ಷಕರಾದ ತಾಹಿರ, ಝುಹರ ಉಪಸ್ಥಿತರಿದ್ದರು.