ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹರೀಶ್ ಇಂಜಾಡಿಯವರಿಗೆ ಮಂಡೆಕೋಲು ಗ್ರಾಮದ ಬೊಳುಗಲ್ಲು ತರವಾಡಿನ ವತಿಯಿಂದ ಗೌರವಿಸಲಾಯಿತು.
ಹರೀಶ್ ಇಂಜಾಡಿ, ಅವರ ಪತ್ನಿ ಚೇತನಾ ಹರೀಶ್, ತಂದೆ ಪುಂಗವ ಗೌಡರನ್ನು ಗೌರವಿಸಲಾಯಿತು. ತರವಾಡಿನ ಯಜಮಾನರಾದ ಮೇದಪ್ಪ ಗೌಡ ಬೊಳುಗಲ್ಲು ಗೌರವ ನೆರವೇರಿಸಿದರು. ಈ ಸಂದರ್ಭದಲ್ಲಿ ಹರೀಶ್ ಇಂಜಾಡಿಯವರ ಸಹೋದರಿ ಚಂಪಾ ವಿ ಗೌಡ, ಕುಟುಂಬದ ಎಲ್ಲ ಸದಸ್ಯರಿದ್ದು ಶುಭ ಹಾರೈಸಿದರು.

























