ಗೂನಡ್ಕ ಬೈಲೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ರಾಜನ್ ದೈವ ಹಾಗೂ ಪರಿವಾರ ದೈವಗಳ ಕಾಲಾವಧಿ ನೇಮೋತ್ಸವ

0

ದ.ಕ ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ರಾಜನ್ ದೈವ ಹಾಗೂ ಪರಿವಾರ ದೈವಗಳ ಕಾಲಾವಧಿ ನೇಮೋತ್ಸವವು ಮೇ 24 ಮತ್ತು 25 ರಂದು ವಿಜೃಂಭಣೆಯಿಂದ ಜರುಗಿತು.

ಮೇ 19 ರಂದು ಗೊನೆ ಕಡಿಯುವ ಮುಹೂರ್ತ , 24 ರಂದು ಕುಯಿಂತೋಡು ಮನೆಯಿಂದ ಹೊರಟು ದೈವಗಳ ಭಂಡಾರ ಮೂಲ ಸ್ಥಾನಕ್ಕೆ ಆಗಮಿಸಿ, ಬಳಿಕ ಉಳ್ಳಾ ಕುಲು ಸ್ಥಾನಕ್ಕೆ ತೆರಳಿ ಉತ್ಸವ ಸ್ಥಾನದಲ್ಲಿ ಸಮಾಪ್ತಿಗೊಂಡಿತು.
ಮೇ 25 ರಂದು ಬೆಳಿಗ್ಗೆ ಬಿರ್ಮೆರ್, ಮದಿಮಲ್, ಬಚ್ಚ ನಾಯ್ಕ, ಮೂವೆ, ಕರಿಯ ನಾಯಕ, ಗಿಳಿ ರಾಮ ಸೇರಿದಂತೆ ಉಪದೈವಗಳ ಕೋಲ, ಶಿರಾಡಿ ( ರಾಜನ್ ) ದೈವದ ನೇಮೋತ್ಸವ ನಡೆಯಿತು. ಮಧ್ಯಾಹ್ನ ಬಳಿಕ ಶ್ರೀ ರಾಜನ್ ದೈವ , ಪುರುಷ ದೈವ ಹಾಗೂ ಪರಿವಾರ ದೈವಗಳ ಕಾಲಾವಧಿ ನೇಮೋತ್ಸವ, ಮಾರಿಕಳ, ಪ್ರಸಾದ ವಿತರಣೆ ನಡೆಯಿತು. ಊರ – ಪರವೂರಿನಿoದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಅರಶಿನ ಪ್ರಸಾದ ವನ್ನು ಪಡೆದು ಕೃಪೆಗೆ ಪಾತ್ರರಾದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಶಿರಾಡಿ ದೈವಸ್ಥಾನದ ಮೊಕ್ತೇಸರ ನಾರಾಯಣ ಕೆ.ಸಿ, ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ , ಕೋಶಾಧಿಕಾರಿ ಕೆ. ಪಿ ಪ್ರಕಾಶ್, ಕಾರ್ಯದರ್ಶಿ ಜಯರಾಮ ಅಬೀರ , ಪ್ರಧಾನ ಕಾರ್ಯದರ್ಶಿ ದಾಮೋದರ ಕೆ , ಕುಳವಾರು ಕುಟುಂಬಸ್ಥರು, ಪದಾಧಿಕಾರಿಗಳು, ಆಡಳಿತ ಮಂಡಳಿ , ಸರ್ವಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.