ಸೀಡ್ಸ್ ಫರ್ಟಿಲಿಟಿ & ಐವಿಎಫ್ ಸೆಂಟರ್ ಕಾಸರಗೋಡು ಇವರ ವತಿಯಿಂದ ಸುಳ್ಯದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ

0

ಸೀಡ್ಸ್ ಫರ್ಟಿಲಿಟಿ & ಐವಿಎಫ್ ಸೆಂಟರ್ ಕಾಸರಗೋಡು ಇವರ ವತಿಯಿಂದ ಮೇ.25 ರಂದು ಸುಳ್ಯ ಗಾಂಧಿನಗರದ ಭಾರತ್ ಮೆಡಿಕಲ್ ಬಳಿಯ ಅಮಿತಾ ಕ್ಲಿನಿಕ್ ಇಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ ನಡೆಯಿತು.

ಈ ಆಸ್ಪತ್ರೆಯ ವತಿಯಿಂದ ಕಳೆದ ಒಂದು ವರ್ಷದಿಂದ ಕಾಸರಗೋಡು ಭಾಗದಲ್ಲಿ ಬಂಜೆತನ ತಪಾಸಣೆ ಶಿಬಿರ ಏರ್ಪಡಿಸಿ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯವನ್ನು ಕೈಗೊಳ್ಳುತ್ತಿದೆ.

ನಮ್ಮಲ್ಲಿ ನುರಿತ ವೈದ್ಯರ ತಂಡ, ಅತ್ಯಾಧುನಿಕ ಯಂತ್ರೋಪಕರಣಗಳು ಜೊತೆಗೆ ಆಸ್ಪತ್ರೆಯೂ ಹೈಟೆಕ್ ಸೌಲಭ್ಯವನ್ನು ಹೊಂದಿದ್ದು, ಈ ಬಾರಿ ಸುಳ್ಯದಲ್ಲಿ ಮೊದಲ ಬಾರಿಗೆ ಈ ಶಿಬಿರವನ್ನು ಏರ್ಪಡಿಸಲಾಗಿತ್ತು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಆಸ್ಪತ್ರೆಯ ಚೀಫ್ ಐವಿಎಫ್ ಸ್ಪೆಷಲಿಸ್ಟ್ ಮತ್ತು ಕನ್ಸಲ್ಟೆಂಟ್ ಆಗಿರುವ ಡಾ ವಿನೋದ್ ಕುಮಾರ್ ತಿಳಿಸಿದರು.

ಇಂದಿನ ಈ ಕಾರ್ಯಕ್ರಮದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನ, ಅನೇಕ ಬಾರಿ ಗರ್ಭಪಾತ, ಅನೇಕ ಐಯುಐ ಅಥವಾ ಐವಿಎಫ್ ವೈಫ್ಯಲತೆ, ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದಿರುವುದು, ಪಿಸಿಓಎಸ್ ಸಮಸ್ಯೆ ಫೆಲೋಪಿಯನ್ ನಾಳದಲ್ಲಿ ಅಡಚಣೆ ಸೇರಿದಂತೆ ಇನ್ನಿತ್ತರ ಸಮಸ್ಯೆಗಳ ಕುರಿತು ಮಾಹಿತಿ ಹಾಗೂ ಆಪ್ತ ಸಮಾಲೋಚನೆ ನಡೆಯಿತು.

ಕಾರ್ಯಕ್ರಮದಲ್ಲಿ ಡಾ.ಅಮಿತಾ , ಆಸ್ಪತ್ರೆಯ ಸ್ಟಾಫ್ ನರ್ಸ್ ಹರಿಚಂದನ, ಶಿಬಿರ ಸಂಘಟಕರಾದ ಅನೂಪ್, ಅಬ್ಬೂಬ್ಬಕರ್ ಸಿದ್ಧಿಕ್ ಉಪಸ್ಥಿತರಿದ್ದರು.