ಮಳೆ ಅವಾಂತರ : ಕುಕ್ಕನ್ನೂರಿನಲ್ಲಿ ಚೇರೆ ಮರ ಬಿದ್ದು 35 ಕ್ಕೂ ಹೆಚ್ಚು ಅಡಿಕೆ ಮರ ನಷ್ಟ May 26, 2025 0 FacebookTwitterWhatsApp ಬಾರೀ ಮಳೆ ಪರಿಣಾಮ ಹಲವು ಕಡೆ ಹಾನಿ ಸಂಭವಿಸಿದ್ದು ಮೇ.26ರಂದು ಬೆಳಗ್ಗೆ ಜಾಲ್ಸೂರು ಗ್ರಾಮದ ಕುಕ್ಕನ್ನೂರು ಚಾವಡಿ ಸಮೀಪ ನಿವಾಸಿ ಗಣೇಶ್ ರೈ ಯವರ ತೋಟದ ಪಕ್ಕದ ಜಮೀನಿನಲ್ಲಿದ್ದ ದೊಡ್ಡ ಗಾತ್ರದ ಚೇರೆ ಮರ ಬುಡ ಸಮೇತ ಮಗುಚಿ ಬಿದ್ದು ಸುಮಾರು 35 ಕ್ಕೂ ಅಧಿಕ ಅಡಿಕೆ ಮರ ನಷ್ಟ ವಾಗಿರುವುದಾಗಿ ತಿಳಿದುಬಂದಿದೆ.