ನಾಗಪಟ್ಟಣ ವೆಂಟೆಡ್ ಡ್ಯಾಂನಿಂದ ನೀರು ಬಿಡುಗಡೆ

0

ಆಲೆಟ್ಟಿಯ ನಾಗಪಟ್ಟಣದಲ್ಲಿರುವ ಕಿಂಡಿ ಅಣೆಕಟ್ಟಿನಿಂದ ನೀರಿನ ಹರಿವು ತೆರವು ಗೊಳಿಸಲಾಗಿದೆ. ಮುಂಗಾರು ಪ್ರಾರಂಭಕ್ಕೆ ಮುಂಚಿತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಣೆಕಟ್ಟಿನ ಮೇಲಿನ ಭಾಗದಲ್ಲಿ ನೀರಿನ ಶೇಖರಣೆ ಹೆಚ್ಚಾಗಿದ್ದುದರಿಂದ ಅಣೆಕಟ್ಟಿನ ಗೇಟು ತೆರದು ನೀರಿನ ಹರಿವು ಬಿಡಲಾಗಿದೆ. ಅಣೆಕಟ್ಟಿನಲ್ಲಿ
ಒಟ್ಟು 14 ಗೇಟುಗಳಿದ್ದು ಈಗಾಗಲೇ 6 ಬಾಗಿಲುಗಳನ್ನು ಮೇಲೆತ್ತಲಾಗಿದ್ದು ಸಂಪೂರ್ಣ ಪ್ರಮಾಣದಲ್ಲಿ ಕೆಳಭಾಗಕ್ಕೆ ನೀರನ್ನು ಬಿಡಲಾಯಿತು. ಈ ಬಾರಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಶೇಖರಣೆಯಾಗಿದ್ದು ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಲೆದೋರಲಿಲ್ಲ. ಸುಳ್ಯ ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡು ಬಂದಿಲ್ಲ ವಾಯಿತು.