ಸುಳ್ಯದ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ತನ್ವಿ ಎನ್. ಬಿ ರಾಷ್ಟ್ರೀಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಥಮ ಸುತ್ತಿನ ಆಯ್ಕೆಯು ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಯ್ಕೆಯಲ್ಲಿ ಆಯ್ಕೆಗೊಂಡಿದ್ದಾರೆ.
ನಂತರ ಎರಡನೇ ಸುತ್ತಿನ ಆಯ್ಕೆಯು ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಆಯ್ಕೆಯಲ್ಲಿ ಆಯ್ಕೆಗೊಂಡು ಮಂಗಳೂರಿನ ರಾಷ್ಟ್ರೀಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯ ಹಾಗೂ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾ ತರಬೇತಿಗೆ ಆಯ್ಕೆಗೊಂಡಿರುತ್ತಾರೆ.















ಇವರು ಐವರ್ನಾಡು ಗ್ರಾಮದ ಬಾರೆತ್ತಡ್ಕ ಮನೆಯ ನಂದಕುಮಾರ್ ಮತ್ತು
ಸುಳ್ಯದ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಶಿಕ್ಷಣ ಸಂಸ್ಥೆ ಮಾಲಕಿ ಶ್ರೀಮತಿ ತೇಜಾಕ್ಷಿ ಕೆ. ನಂದ ಕುಮಾರ್ ದಂಪತಿಯ ಪುತ್ರಿ.










