ಬೆಳ್ಳಾರೆ ಸಮೀಪದ ಕೊಳಂಬಳದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರಿಗೆ ಸಮಸ್ಯೆಯಾಗಿದೆ.















ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದಾಗಿ ಚರಂಡಿಯಲ್ಲಿ ಪೈಪ್ ಹಾಕಿ ಮುಚ್ಚಲಾಗಿದ್ದು ಇದೀಗ ಚರಂಡಿಯೂ ಇಲ್ಲದೆ ರಸ್ತೆಯೂ ಇಕ್ಕಟ್ಟಾಗಿ ವಾಹನಗಳು ರಸ್ತೆಯಲ್ಲಿ ಬಾಕಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಿಡಬ್ಲ್ಯುಡಿ ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.










