ಆಲೆಟ್ಟಿ ಗ್ರಾಮದ ಕಲ್ಲೆಂಬಿ ಮನೆತನದ ಹಿರಿಯರು ಯಜಮಾನರಾಗಿದ್ದ ಕಾರ್ಯಪ್ಪ ಗೌಡ ರವರು ಮೇ.18 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಮೇ.28 ರಂದು ಮೃತರ ಸ್ವಗೃಹ ಕಲ್ಲೆಂಬಿಯಲ್ಲಿ ನಡೆಯಿತು.
ಮೃತರ ಜೀವನಗಾಥೆಯ ಕುರಿತು ಆಲೆಟ್ಟಿ ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು ಹಾಗೂ ಪಂಚಾಯತ್ ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ ರವರು ನುಡಿ ನಮನ ಸಲ್ಲಿಸಿದರು.















ಈ ಸಂದರ್ಭದಲ್ಲಿ
ಮೃತರ ಪತ್ನಿ ಶ್ರೀಮತಿ ರುಕ್ಮಿಣಿ, ಪುತ್ರರಾದ ಹರಿಪ್ರಸಾದ್ ಕಲ್ಲೆಂಬಿ, ಕಿರಣ್ ಕಲ್ಲೆಂಬಿ, ಮಿಥುನ್ ಕಲ್ಲೆಂಬಿ ಮತ್ತು ಸಹೋದರ,ಸಹೋದರಿಯರು ಹಾಗೂ ಕಲ್ಲೆಂಬಿ ಕುಟುಂಬದಹಿರಿಯ,ಕಿರಿಯ ಸದಸ್ಯರು ಉಪಸ್ಥಿತರಿದ್ದರು.
ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಿದರು.










