ಕುಕ್ಕೆ ದೇವಸ್ಥಾನ ವ್ಯ.ಸ. ಅಧ್ಯಕ್ಷರಿಂದ ಆಶ್ಲೇಷ ಪೂಜಾಮಂದಿರದ ದಾನಿಯ ಭೇಟಿ

0

ಕರ್ನಾಟಕ ಸರ್ಕಾರದ ಮಾಜಿ ಮುಜರಾಯಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಅವರ ಅಳಿಯ ಉದ್ಯಮಿ ಜೈ ಪುನೀತ್ ಅವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮ್ಮ ಸೇವಾ ರೂಪದಲ್ಲಿ ನೂತನ ಆಶ್ಲೇಷ ಬಲಿ ಪೂಜಾಮಂದಿರವನ್ನು ನಿರ್ಮಾಣ ಮಾಡಿಕೊಡಲು ಮುಂದೆ ಬಂದಿದ್ದು , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿಯವರು ಇಂದು ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.


ಆಶ್ಲೇಷ ಬಲಿ ಪೂಜಾಮಂದಿರವನ್ನು ನಿರ್ಮಿಸಲು ಸರಕಾರದಿಂದ ಅನುಮತಿ ಕೊಡಿಸಿದ ಕೂಡಲೇ ಕಾಮಗಾರಿ ಆರಂಭಿಸುವುದಾಗಿ ಜೈಪುನೀತ್ ಹೇಳಿದರು. ಈ ಬಗ್ಗೆ ಇಲಾಖೆಯ ಜತೆ ಪತ್ರವ್ಯವಹಾರ ಮಾಡಿ ಸೂಕ್ತ ಕ್ರಮ ಕೈಗೊಂಡು ಆಶ್ಲೇಷ ಪೂಜಾ ಮಂದಿರ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲು ಸರ್ವ ರೀತಿಯ ಸಹಕಾರ ನೀಡುವುದಾಗಿ ಹರೀಶ್ ಇಂಜಾಡಿ ಭರವಸೆ ನೀಡಿದರು. ಈ ವೇಳೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲ್ಯಾನ್ ಕಮಿಟಿ ಸದಸ್ಯ ಪವನ್ ಎಂ.ಡಿ., ನಾಗಭೂಷಣ ಗುರೂಜಿ, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಸುಬ್ರಹ್ಮಣ್ಯದ ಭವಿಷ್ ಹರೀಶ್ ಇಂಜಾಡಿಯವರ ಜತೆಗಿದ್ದರು.