ಮರ್ಕಂಜ ಗ್ರಾಮದ ಪುರ ತೇಜಾನಂದ ಎಂಬವರು ಮಧ್ಯಾಹ್ನ ಹೊತ್ತಲ್ಲಿ ತಮ್ಮ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗ ಕಾಡುಕೋಣ ಹಾಯ್ದು ಕೈಗೆ ಗಂಭೀರ ಗಾಯವಾದ ಘಟನೆ ಮೇ. 26ರಂದು ವರದಿಯಾಗಿದೆ.















ಇದೀಗ ತೇಜಾನಂದರವರು ಕೆವಿಜಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ. 27ರಂದು ಜಿ. ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಮತ್ತು ಮರ್ಕಂಜ ಗ್ರಾಮ ಪಂಚಾಯಿತ್ ಸದಸ್ಯ ಗೋವಿಂದ ಅಳವುಪಾರೆ ಆಸ್ಪತ್ರೆಗೆ ಭೇಟಿ ನೀಡಿದರು.
ಘಟನಾ ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.










