














ಒಂದು ವಾರದಿಂದ ಬಾರೀ ಮಳೆಯಾಗುತ್ತಿದ್ದು ಸುಳ್ಯದ ಪಯಸ್ವಿನಿ ನದಿಯ ನೀರಿನ ಮಟ್ಟ ಹೆಚ್ಚಾಳವಾಗುತ್ತಿದ್ದು ನಾಗಪಟ್ಟಣದಲ್ಲಿ ವೆಂಟೆಡ್ ಡ್ಯಾಮ್‌ಗೆ ನ ೪ ಗೇಟುಗಳನ್ನು ಮಾತ್ರ ತೆಗೆದಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.
ಕಳೆದ ಬೇಸಗೆಯಲ್ಲಿ ಡ್ಯಾಂ ಗೆ ಗೇಟು ಹಾಕಿ ನಗರಕ್ಕೆ ನೀರು ಸರಬರಾಜು ವ್ಯವಸ್ಥೆ ಮಾಡಲಾಗುತಿತ್ತು. ಇದೀಗ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಡ್ಯಾಂ ನ ೪ ಗೇಟನ್ನು ಮಾತ್ರ ಓಪನ್ ಮಾಡಲಾಗಿದೆ. ನದಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಎಲ್ಲ ಗೇಟುಗಳನ್ನು ತೆರೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.










