ಮೇ.30ರಂದು ಸಂಜೆಯಿಂದ ಸುರಿದ ಬಾರೀ ಮಳೆಗೆ ಬೆಳ್ಳಾರೆ – ಗೌರಿಹೊಳೆ – ಪಡ್ಪು ಭಾಗದ ತಗ್ಗು ಪ್ರದೇಶದಲ್ಲಿ ಬಾರೀ ನೀರು ನುಗ್ಗಿದ ಪರಿಣಾಮ 5 ಮನೆಗಳವರನ್ನು ಸ್ಥಳಾಂತರ ಮಾಡಿರುವುದಾಗಿ ತಿಳಿದುಬಂದಿದೆ
ರಾತ್ರಿ ವಿಷಯ ತಿಳಿದ ತಹಶೀಲ್ದಾರ್ ಮಂಜುಳಾರವರು, ಕಂದಾಯ ನಿರೀಕ್ಷ ಅವಿನ್ ರಂಗತ್ತಮಲೆಯವರ ನೇತೃತ್ವದಲ್ಲಿ ಪಿಡಿಒ, ವಿ.ಎ., ಅಗ್ನಿಶಾಮಕ ಸಹಿತ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದರು. ತಗ್ಗು ಪ್ರದೇಶವಾದುದರಿಂದ ಬಾರೀ ಪ್ರಮಾಣದ ನೀರು ಬಂದಿತ್ತು.
ಮೂರು ಮನೆಯವರು ನೀರು ಬರುವ ಮೊದಲೇ ಸ್ಥಳಾಂತಗೊಂಡಿದ್ದರೆಂದು, ಎರಡು ಮನೆಗಳವರನ್ನು ಶಿಫ್ಟ್ ಮಾಡಿ ಅಧಿಕಾರಿಗಳು ವಾಪಾಸು ಅಲ್ಲಿಂದ ತೆರಳುವಾಗ ರಾತ್ರಿ ಒಂದೂವರೆ ಆಗಿತ್ತು.
ಆರ್.ಐ. ಕಾರು ಬಾಕಿ















ಗೌರಿಹೊಳೆ ಸಮೀಪದ ರಸ್ತೆಯಲ್ಲಿ ಬಾರೀ ನೀರು ಬಂದು ರಸ್ತೆ ಬ್ಲಾಕ್ ಆಗಿತ್ತು. ಆರ್.ಐ. ಅವಿನ್ ರು ಅಲ್ಲಿ ನಡೆದು ಹೋಗಲು ಸಾಧ್ಯವಾಗದೇ ಕಾರಿನಲ್ಲಿ ಹೋದರು. ಕಾರು ಕೂಡಾ ಹೋಗಲು ಸಾಧ್ಯವಾಗದೇ ಅಲ್ಲೇ ಬಾಕಿಯಾಯಿತು.
ರಾತ್ರಿ ಅವರು ಅಗ್ನಿಶಾಮಕ ವಾಹನದಲ್ಲಿ ಸುಳ್ಯ ತಲುಪಿದರೆಂದು ತಿಳಿದುಬಂದಿದೆ.
ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿಯೂ ಒಂದು ಮನೆಯವರನ್ನು ಶಿಫ್ಟ್ ಮಾಡಲಾಗಿದೆ.
ಕರ್ಮಜೆ ಶ್ರೀಧರ ಎಂಬವರ ಮನೆಯ ಕಾಂಪೌಂಡ್ ಮಗುಚಿ ಬಿದ್ದಿದೆ ಈ ಮಾಹಿತಿ ಪಡೆದ ತಾ.ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.










