ನೆಟ್ಟಾರು :ಅಕ್ಷಯ ಯುವಕ ಮಂಡಲದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

0

ನಿರಂತರ ಸಮಾಜಮುಖಿ ಕೆಲಸಗಳಿಂದ ಯುವಕ ಮಂಡಲಗಳು ಯಶಸ್ವಿ – ಆರ್.ಕೆ.ಭಟ್

ರಕ್ತದಾನ ಶ್ರೇಷ್ಟದಾನ ಜನರು ಜಾಗೃತರಾಗಬೇಕು – ಈರಯ್ಯ ಡಿ.ಎನ್.

ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನೆಟ್ಟಾರಿನ ಅಕ್ಷಯ ಯುವಕ ಮಂಡಲ ವತಿಯಿಂದ ಮೇ 31ರಂದು ರಕ್ತದಾನ ಶಿಬಿರ ನಡೆಯಿತು.


ಶಿಬಿರದ ಉದ್ಘಾಟನೆಯನ್ನು ಬೆಳ್ಳಾರೆ ಸಿ ಎ ಬ್ಯಾಂಕ್ ಇದರ ಅಧ್ಯಕ್ಷರಾದ ಆರ್ .ಕೆ .ಭಟ್ ಕುರುಂಬುಡೇಲು ನೆರವೇರಿಸಿ ಮಾತನಾಡಿ ಯುವಕ ಮಂಡಲವು ಹತ್ತು ಹಲವು ಸಮಾಜಮುಖಿ ಕೆಲಸವನ್ನು ನಿರಂತರ ಮಾಡಿಕೊಂಡು ಬರುತ್ತಿದೆ. ರಕ್ತದಾನದಂತಹ ಶಿಬಿರವು ಆಯೋಜನೆ ಮಾಡಬೇಕು ಅಂತ ಹೇಳಿದಾಗ ರಕ್ತದ ಪೂರೈಕೆಯ ಅವಶ್ಯಕತೆ ಮನಗಂಡು ತಕ್ಷಣಕ್ಕೆ ಒಪ್ಪಿಕೊಂಡು ಈ ಕಾರ್ಯಕ್ರಮವನ್ನು ನಾವು ಮಾಡುತ್ತೇವೆ ಎಂದರು. ಮನುಷ್ಯ ಮನುಷ್ಯರ ಸಂಬಂಧಗಳು ಆ ಮೂಲಕ ಗಟ್ಟಿಯಾಗುತ್ತವೆ. ರಕ್ತ ನೀಡಿದ ವ್ಯಕ್ತಿ ಯನ್ನು ರಕ್ತ ಪಡೆದುಕೊಂಡವರು ಯಾವಾಗಲು ನೆನಪಲ್ಲಿ ಇಟ್ಟುಕೊಳ್ಳುತ್ತಾರೆ.

ಹಾಗಾಗಿ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಅತಿಥಿಗಳಾದ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಈರಯ್ಯ ಡಿ ಮಾತನಾಡಿ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ವಿಚಾರ. ರಕ್ತದಾನ ಶ್ರೇಷ್ಠದಾನ ಇದರ ಬಗ್ಗೆ ಜನರು ಜಾಗೃತ ರಾಗಬೇಕು ನಿಮಗೆ ಅಭಿನಂದನೆಗಳು ಎಂದರು. ನೆಟ್ಟಾರು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ವಸಂತ ನೆಟ್ಟಾರು ಮಾತನಾಡಿ ಬೆಳ್ಳಿ ಹಬ್ಬ ಸಂಭ್ರಮದಲ್ಲಿರುವ ಯುವಕ ಮಂಡಲವು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಶುಭವಾಗಲಿ ಎಂದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತನಿಧಿ ವಿಭಾಗದ ಆಂಟನಿ ಡಿಸೋಜಾ ಮಾತನಾಡಿ ಆರೋಗ್ಯವಂತ ಶರೀರ ಹೊಂದಿರುವ 18ರ ಮೇಲ್ಪಟ್ಟ ವರು ರಕ್ತದಾನ ಮಾಡಬಹುದು ಜನರಲ್ಲಿ ಅದರ ಬಗ್ಗೆ ಜಾಗೃತಿ ಯಾಗಲಿ. ಈ ಭಾಗದಲ್ಲಿ ಹಲವು ಬಾರಿ ರಕ್ತದಾನ ಶಿಬಿರಗಳು ಆಗಿದೆ. ಯುವ ಸಮುದಾಯ ಇದರ ಬಗ್ಗೆ ಹೆಚ್ಚು ಕ್ರಿಯಾಶೀಲರಾದಾಗ ಇದು ಇನ್ನಷ್ಟು ಹೆಚ್ಚು ಕಡೆ ನಡೆಯುತ್ತದೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ನಳಿನಾಕ್ಷಿ ಮಾತನಾಡಿ ಯುವಕ ಮಂಡಲದವರು ಸಮಾಜಮುಖಿ ಕಾರ್ಯದ ಜೊತೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗೆ ಪ್ರತೀ ವರ್ಷ ಪ್ರೋತ್ಸಾಹ ನೀಡುತ್ತಿದ್ದಾರೆ. ಶಾಲೆಯ ಅಭಿವೃದ್ಧಿಗೆ ಇವರ ಕೊಡುಗೆ ಅಪಾರ. ಇದರ ಯುವಕರ ಕಾರ್ಯ ಅತ್ಯುತ್ತಮ ವಾದುದು ಕಾರ್ಯಕ್ರಮ ಶುಭವಾಗಲಿ ಎಂದರು.ವೇದಿಕೆಯಲ್ಲಿ ಶೆಣೈ ಸ್ವೀಟ್ಸ್ ಮಾಲಕರಾದ ಸುದರ್ಶನ್ ಶೆಣೈ, ಅಕ್ಷತಾ ಮಹಿಳಾ ಮಂಡಲ ಸ್ಥಾಪಕ ಅಧ್ಯಕ್ಷರಾದ ಗೀತಾ ಗೋಕುಲದಾಸ್, ಯುವಕ ಮಂಡಲ ಸ್ಥಾಪಕಧ್ಯಕ್ಷರಾದ ದೇವದಾಸ್ ನೆಟ್ಟಾರು ಉಪಸ್ಥಿತರಿದ್ದರು. ಯುವಕ ಮಂಡಲದ ಪ್ರವೀಣ್ ಚಾವಡಿ ಬಾಗಿಲು ಸ್ವಾಗತಿಸಿ ದರು. ಅಕ್ಷಯ ಯುವಕ ಅಧ್ಯಕ್ಷ ಭಾಸ್ಕರ್ ನೆಟ್ಟಾರು ಧನ್ಯವಾದವಿತ್ತರು. ಶೈಲೇಶ್ ನೆಟ್ಟಾರು ನಿರೂಪಿಸಿ ದರು.ಕಾರ್ಯಕ್ರಮದಲ್ಲಿ ಯುವಕ ಮಂಡಲ ಸದಸ್ಯರು ಮಹಿಳಾ ಮಂಡಲ ಸದಸ್ಯರು ಊರವರು ಹಾಜರಿದ್ದರು.


ಹಲವು ಮಂದಿಯಿಂದ ಸ್ವಯಂಪ್ರೇರಿತ ರಕ್ತದಾನ
ಶಿಬಿರದಲ್ಲಿ ಹಲವು ಜನರು ಭಾಗವಹಿಸಿದ್ದರು.
ಒಟ್ಟು 52 ಮಂದಿ ರಕ್ತದಾನ ಮಾಡಿದರು.8ಮಂದಿ ಪ್ರಥಮ ಬಾರಿಗೆ ರಕ್ತದಾನ ಮಾಡಿದರು. ಮೊದಲ ಬಾರಿ ರಕ್ತದಾನ ಮಾಡಿದವರನ್ನು ಯುವಕ ಮಂಡಲದ ವತಿಯಿಂದ ಗುಲಾಬಿ ಹೂ ನೀಡಿ ಗೌರವಿಸಲಾಯಿತು.