SBS ಗೂನಡ್ಕ ಯುನಿಟ್ ವತಿಯಿಂದ ಮಾದಕ ದ್ರವ್ಯದ ವಿರುದ್ದ ಅಭಿಯಾನ

0

“ಸ್ನೇಹ ಸಹವಾಸ” ಎಂಬ ಏಕದಿನ ಶಿಬಿರ

ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಅಧೀನದ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದಲ್ಲಿ ಎಸ್ ಬಿ ಎಸ್ (ಸುನ್ನಿ ಬಾಲ ಸಂಘ)ವತಿಯಿಂದ ಮಾದಕ ವಸ್ತುಗಳ ಜಾಗೃತಿ ಕುರಿತು ಸ್ನೇಹ ಸಹವಾಸ ಅಭಿಯಾನ ಕಾರ್ಯಕ್ರಮ ಜೂನ್ 1 ರಂದು ಜರುಗಿತು.

ಸ್ಥಳೀಯ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಶದಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಮಾದಕ ವಸ್ತು ಗಳ ಬಳಕೆಯಿಂದ ಜೀವನದಲ್ಲಿ ಉಂಟಾಗುವ ಅನಾಹುತಗಳ ಬಗ್ಗೆ ಮಾಹಿತಿ ನೀಡಿದರು.

ಮುಅಲ್ಲಿಂ ಬಹು.ಸವಾದ್ ಮದನಿಯವರು ಶಿಬಿರವನ್ನು ಉದ್ಘಾಟಿಸಿದರು.

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕರವರು ಮಾತನಾಡಿ “ಪ್ರಸ್ತುತ ವಿದ್ಯಾರ್ಥಿಗಳು ಸೇರಿದಂತೆ ಯುವ ಸಮೂಹವು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದು ಗಂಭೀರ ವಿಷಯವಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು, ಮಾದಕ ವ್ಯಸನಿಗಳಾದರೆ ಅದರಿಂದ ಹೊರಬರಲು ಬಹಳ ಕಷ್ಟವಿದೆ, ಅಂತಹವರಿಗೆ ಸಾಮಾಜಿಕವಾಗಿ ಯಾವುದೇ ಗೌರವವು ಇರುವುದಿಲ್ಲ, ನಿಮ್ಮ ಭವಿಷ್ಯದ ದೃಷ್ಠಿಯಿಂದ ಮಾದಕ ವ್ಯಸನಿಗಳಾಗದೆ, ಭವಿಷ್ಯದಲ್ಲಿ ವಿದ್ಯಾವಂತ ಉತ್ತಮ ಪ್ರಜೆಗಳಾಗಿ ಬಾಳಲು ನಿಮ್ಮ ಗುರಿಯನ್ನು ಹೊಂದಿರಬೇಕೆಂದು” ಹೇಳಿದರು.

ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪಿ.ಕೆ.ಅಬೂಸಾಲಿ ಗೂನಡ್ಕ ಹಾಗೂ ಶೌವಾದ್ ಗೂನಡ್ಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇತ್ತೀಚೆಗೆ ಮದನಿ ಬಿರುದನ್ನು ಪಡೆದ ಬಹು.ಸವಾದ್ ಮದನಿಯವರನ್ನು ಈ ಸಂದರ್ಭ ಆಡಳಿತ ಕಮಿಟಿ ವತಿಯಿಂದ ಅಭಿನಂದಿಸಲಾಯಿತು.

ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಸ್.ಎ.ಅಶ್ರಫ್ ದೊಡ್ಡಡ್ಕ, ಮಾಜಿ ಅಧ್ಯಕ್ಷರಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಗೂನಡ್ಕ ಯುನಿಟ್ ನ SYS ಅಧ್ಯಕ್ಷರಾದ ಮುನೀರ್ ಪ್ರಗತಿ, SSF ಅಧ್ಯಕ್ಷರಾದ ಉನೈಸ್ ಗೂನಡ್ಕ, SBS ಅಧ್ಯಕ್ಷರಾದ ಅನಸ್ ಡಿ.ಎಂ ಹಾಗೂ ಆರೀಫ್ ಟಿ.ಎ. ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

SBS ಪದಾಧಿಕಾರಿ ಶಹನವಾಜ್ ಕುಂಭಕ್ಕೋಡ್ ಗೂನಡ್ಕ ಸ್ವಾಗತಿಸಿದರು.