ಕಳೆದ ೩೦ ವರ್ಷಗಳಿಂದ ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರಾಗಿದ್ದು ಕೊಡಗು, ಮೈಸೂರು, ಸುಳ್ಯ ಭಾಗದಲ್ಲಿ ಆಕಾಶವಾಣಿ ಕೇಳುಗರ ಮನೆಮಾತಾಗಿದ್ದ ಸುಬ್ರಾಯ ಸಂಪಾಜೆಯವರು ಮೇ.೩೧ರಂದು ವೃತ್ತಿಯಿಂದ ನಿವೃತ್ತರಾದರು.















೧೯೯೧ರಲ್ಲಿ ಮುಂಗಾರು ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಸುಬ್ರಾಯ ಸಂಪಾಜೆಯವರು ಬಳಿಕ ಕೊಡಗಿನ ಮರಗೋಡು ಭಾರತೀ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ೨ ವರ್ಷ ಕಾರ್ಯನಿರ್ವಹಿಸಿದರು. ನಂತರ ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ, ಕೋಟ ವಿವೇಕ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ೧೯೯೫ರಲ್ಲಿ ಮಡಿಕೇರಿ ಆಕಾಶವಾಣಿಗೆ ಉದ್ಘೋಷಕರಾಗಿ ಸೇರಿದರು.
ತನ್ನ ಮಾಧುರ್ಯಯುತವಾದ ಗಡಸು ಧ್ವನಿಯಿಂದ ಕೇಳುಗರ ಚಿತ್ತವನ್ನು ಆಕರ್ಷಿಸುತ್ತಿದ್ದ ಸುಬ್ರಾಯ ಸಂಪಾಜೆಯವರ ಬಗ್ಗೆ ಮಡಿಕೇರಿ ಆಕಾಶವಾಣಿಯ ಎಲ್ಲ ಕೇಳುಗರಲ್ಲಿ ವಿಶೇಷ ಪ್ರೀತಿ, ಸೆಳೆತವಿದೆ. ವೃತ್ತಿಯ ಜತೆಗೆ ಬರಹಗಾರರಾಗಿಯೂ ಪ್ರಸಿದ್ಧರಾ ಗಿರುವ ಅವರು ಕಿರು ಕಾದಂಬರಿಯನ್ನು, ಪುರಾಣದ ಪುನರವಲೋಕನದ ಕಳೆದ ೩೦ ವರ್ಷಗಳಿಂದ ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರಾಗಿದ್ದು ಕೊಡಗು, ಮೈಸೂರು, ಸುಳ್ಯ ಭಾಗದಲ್ಲಿ ಆಕಾಶವಾಣಿ ಕೇಳುಗರ ಮನೆಮಾತಾಗಿದ್ದ ಸುಬ್ರಾಯ ಸಂಪಾಜೆಯವರು ಮೇ.೩೧ರಂದು ವೃತ್ತಿಯಿಂದ ನಿವೃತ್ತರಾದರು.
ಕೃತಿಗಳನ್ನು ಕೊಡಗಿನ ಬಗೆಗೆ ಆಕರ ಕೃತಿಯನ್ನೂ ರಚಿಸಿದ್ದಾರೆ. ಯಕ್ಷಗಾನ ಕಲಾವಿದರಾಗಿಯೂ, ತಾಳಮದ್ದಳೆ ಅರ್ಥಧಾರಿಯಾಗಿಯೂ, ಕಾರ್ಯಕ್ರಮಗಳ ಉದ್ಘೋಷಕರಾಗಿಯೂ ಅವರು ಪ್ರಸಿದ್ಧರಾಗಿದ್ದಾರೆ. ಇವರ ಪತ್ನಿ ಪೂರ್ಣಿಮಾರವರು ಗೃಹಿಣಿಯಾಗಿದ್ದು, ಪುತ್ರ ಸಮನ್ವಯ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಸಮನ್ವಿತಾ ಮಡಿಕೇರಿಯಲ್ಲಿ ದ್ವಿತೀಯ ಪಿ.ಯು. ವಿದ್ಯಾರ್ಥಿನಿಯಾಗಿದ್ದಾರೆ.










