ಇಂದು ಭರದಿಂದ ನಡೆಯುತ್ತಿದೆ ಮರ ತೆರವು ಕಾರ್ಯಾಚರಣೆ

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಪೆರುವಾಜೆಯ ಮುಂಡಾಜೆಯಲ್ಲಿ ಗುಡ್ಡ ಮರಸಮೇತವಾಗಿ ಜರಿದು ರಸ್ತೆ ಬಂದ್ ಆಗಿದ್ದು 20 ಮನೆಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.
ಬೆಳ್ಳಾರೆ ತಡಗಜೆ ಘನತ್ಯಾಜ್ಯ ಘಟಕದ ಸಮೀಪದ ಮಾರ್ಗವಾಗಿ ಪೆರುವಾಜೆಯ ಮುಂಡಾಜೆ ಕಡೆಗೆ ಹೋಗುವ ಸಂಪರ್ಕ ರಸ್ತೆ ಇದಾಗಿದ್ದು ರಸ್ತೆ ಬಂದ್ ಆಗಿರುವ ಕಾರಣ ಜನರಿಗೆ ತೊಂದರೆಯಾಗಿದೆ.
















ಶಾಲಾ ಮಕ್ಕಳು, ದಿನನಿತ್ಯ ಬೆಳ್ಳಾರೆ ಕಡೆಗೆ ಬರುವ ಜನರಿಗೆ ತೊಂದರೆಯಾಗಿದ್ದು ನಡೆದು ಬರಲು ಕಷ್ಟಕರವಾಗಿದೆ.
ಗುಡ್ಡ ಮರ ಸಮೇತ ಜಾರಿ ಬಂದು ಕಾಂಕ್ರೀಟ್ ರಸ್ತೆಯಲ್ಲಿ ನಿಂತಿದೆ.
ಕೆಳಗೆ ದೊಡ್ಡ ಗುಂಡಿಗಳಿದ್ದು ಇನ್ನು ಮಳೆ ಬಂದರೆ ಮತ್ತಷ್ಟು ಗುಡ್ಡ ಜರಿಯುವ ಸಂಭವವಿದೆ.

ವಾಹನಗಳು ಬರಲಾರದೆ ಮನೆಯಲ್ಲಿಯೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಎರಡು ರಿಕ್ಷಾಗಳು ಕೂಡಾ ರಸ್ತೆ ಬ್ಲಾಕ್ ಆದ ಮತ್ತೊಂದು ಬದಿಯಲ್ಲಿಯೇ ಬಾಕಿಯಾಗಿದೆ.
ಬರೆಜರಿದ ಭಾಗದಲ್ಲಿ ಮರ ತೆರವು ಕಾರ್ಯ ಇಂದು ಭರದಿಂದ ನಡೆಯುತ್ತಿದೆ.










