ಸುಳ್ಯದ ಟಿಎಪಿಸಿಎಂಎಸ್ ನೂತನ ಗೋದಾಮು ಕಟ್ಟಡಕ್ಕೆ ಶಂಕುಸ್ಥಾಪನೆ ಜೂ.2ರಂದು ನಡೆಯಿತು.
ಸೂಡಾ ಅಧ್ಯಕ್ಷ ಕೆ. ಎಂ. ಮುಸ್ತಾಫ ನೂತನ ಗೋದಾಮು ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಶುಭ ಹಾರೈಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ದೀಪ ಬೆಳಗಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.















ಸಂಘದ ಉಪಾಧ್ಯಕ್ಷ ಪಿ.ಎಸ್ ಗಂಗಾಧರ, ನಿರ್ದೇಶಕರುಗಳಾದ ಸೋಮಶೇಖರ ಕೊಯಿಂಗಾಜೆ, ಎಸ್ ಸಂಶುದ್ದಿನ್, ರಾಜೀವಿ ರೈ, ಸುರೇಶ್ ಅಮೈ, ಚಂಚಲಾ ಸನತ್ ಮುಳುಗಾಡು, ಚಂದ್ರಶೇಖರ ನಾಯ್ಕ, ಭುವನೇಂದ್ರದಾಸ್ ಉಬರಡ್ಕ, ಇಂಜಿನಿಯರ್ ಪ್ರಸಾದ್ ಎಂ.ಎಸ್, ಪ್ರಸನ್ನ ನಿತ್ಯಾನಂದ, ಸೌಮ್ಯ ಮಾಧವ ನಿಡ್ಯಮಲೆ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ ವಂದಿಸಿದರು.
ಸಂಘದ ಸಿಬ್ಬಂದಿ ವರ್ಗ ಸಹಕರಿಸಿದರು.










